‘ಹಿಂದೆ ಚಾಯ್ ವಾಲಾ ಹೆಸ್ರಲ್ಲಿ, ಈಗ ಚೌಕೀದಾರ್ ಹೆಸ್ರಲ್ಲಿ ಅಧಿಕಾರ ಹಿಡಿಯಲು ಹೊರಟಿದ್ದಾರೆ’

ಉಡುಪಿ: ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ. ಇದನ್ನು ತಡೆಯಲು ದೇಶದಲ್ಲಿ ಜಾತ್ಯಾತೀತ ಪಕ್ಷಗಳು ಒಟ್ಟುಗೂಡಿವೆ. ಮೋದಿ ಐದು ವರ್ಷ ಏನು ಸಾಧನೆ ಮಾಡಿದ್ದಾರೆ ಅನ್ನೋದು ಚರ್ಚೆಯೇ ಆಗುತ್ತಿಲ್ಲ. ಕಳೆದ ಬಾರಿ ಚಾಯ್ ವಾಲಾ ಹೆಸರಲ್ಲಿ, ಈ ಬಾರಿ ಚೌಕೀದಾರ್ ಹೆಸರಲ್ಲಿ ಅಧಿಕಾರ ಹಿಡಿಯಲು ಹೊರಟಿದ್ದಾರೆ ಎಂದು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

ನಗರದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವೆಂಕಟರಾವ್ ನಾಡಗೌಡ, ಸೂಕ್ಷ್ಮ ವಿಷಯ ತೆಗೆದು ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಯತ್ನ
ಈ ಬಾರಿ ಹಿಂದಿತ್ವದ ಪ್ರಯೋಗಕ್ಕೂ ಪ್ರಧಾನಿ ಇಳಿದಿದ್ದಾರೆ. ಆದರೆ ಪ್ರಧಾನಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬೇಕೇ ಹೊರತು ಒಂದು‌ ಸಮುದಾಯದ ಬಗ್ಗೆ ಹೇಳಿಕೆ ಸರಿ ಅಲ್ಲ. ಪ್ರಣಾಳಿಕೆಯ ಯಾವ ಆಶ್ವಾಸನೆಯನ್ನೂ ಪ್ರಧಾನಿ ಮೋದಿ ಈಡೇರಿಸಿಲ್ಲ ಎಂದು ಹೇಳಿದರು.

ಏಳು ಜನ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ವೆಂಕಟರಾವ್ ನಾಡಗೌಡ, ನಾಪತ್ತೆಯಾದ ಮೀನುಗಾರರ ಕುಟುಂಬದವರನ್ನು ಭೇಟಿಯಾಗಿದ್ದೇನೆ. ಸದ್ಯ ಒಂದು ಲಕ್ಷ ರೂಪಾಯಿ ತಾತ್ಕಾಲಿಕ ಬಿಡುಗಡೆ ಮಾಡಲಾಗಿದೆ. ಹುಡುಕಾಟಕ್ಕೆ ಎಲ್ಲ ರೀತಿಯ ಪ್ರಯತ್ನವನ್ನು ಮಾಡಿದ್ದೇವೆ. ಕೇಂದ್ರ ಗೃಹ ಸಚಿವರ ಭೇಟಿಗೆ ಅವಕಾಶ ಕೇಳಿದ್ದೆವು. ನಮಗೆ ಅಪಾಯಿಂಟ್ ಮೆಂಟ್ ಕೊಡಲಿಲ್ಲ. ಈಗ ಏನೂ ಹೇಳಲು ನಿಖರ ಮಾಹಿತಿ ಇಲ್ಲ. ಸರ್ಕಾರದ ಬಳಿ ಯಾವುದೇ ಖಚಿತ ಮಾಹಿತಿ ಇಲ್ಲ. ಈ ಅವಘಡದ ಬಳಿಕ ಇಸ್ರೊ ಕೋರಿಕೆ ಮೇರೆಗೆ ಬೋಟ್​​​​ಗಳಿಗೆ ಒಂದು ಸಲಕರಣೆ ಅಳವಡಿಕೆಗೆ ನಿರ್ಧಾರ ಮಾಡಿದ್ದೇವೆ. ಇದಕ್ಕಾಗಿ ಬಜೆಟ್​​​ನಲ್ಲಿ ₹ 3 ಕೋಟಿ ಮೀಸಲಿಟ್ಟಿದ್ದೇವೆ. ಇನ್ನು ಮುಂದೆ ಯಾವುದೇ ಬೋಟ್ ಅವಘಡ ಆದರೂ ನಿಖರ ಮಾಹಿತಿ ಸಿಗುತ್ತೆ. ನೌಕಾದಳವೂ ಸಾಕಷ್ಟು ಹುಡುಕಾಟ ನಡೆಸಿದೆ. ಈತನಕ ಯಾವುದೇ ಸುಳಿವೂ ಸಿಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದರು. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಊರಲ್ಲಿ ಐವರು ಮೀನುಗಾರರು ನಾಪತ್ತೆಯಾಗಿದ್ದಾರೆ. ಅವರು ಒಬ್ಬ ಮೀನುಗಾರರ ಮನೆಗೆ ಹೋಗಿದ್ದಾರಾ? ಅನಂತಕುಮಾರ್ ಹೆಗಡೆಗೆ ಜವಾಬ್ದಾರಿ ಇಲ್ಲವೇ? ಅವರು ಸಂಸದರು, ಮಂತ್ರಿಗಳು, ಅವರಿಗೆ ಜವಾಬ್ದಾರಿ ಇಲ್ಲ ಎಂದು ಗುಡುಗಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv