ಮೀನೂಟದ ಮಸಾಲೆಯ ಸ್ಟೋರಿ ಕೇಳಿದ್ರೆ, ಬಾಯಲ್ಲಿ ನೀರ್​ ಬರೋದು ಗ್ಯಾರಂಟಿ..!

ಉಡುಪಿ: ಫಿಶ್​ಕರಿ ಫ್ರೆಶ್​ ಆಗಿ ಮಾಡ್ಕೊಟ್ರೆ ನಾನ್​ವೆಜ್​ ಪ್ರಿಯರಲ್ಲಿ ಯಾರು ತಾನೇ ಬೇಡ ಅಂತಾರೇ ಹೇಳಿ..ಅದರಲ್ಲೂ ಕೈಯಲ್ಲಿ ರುಬ್ಬಿರೋ ಮಸಾಲೆ ಹಾಕಿದ್ರೆ, ಮೀನೂಟದ ಖದರೇ ಬೇರೆ ಮಾರಾಯ್ರೆ..ಕೈ ತೊಳ್ಕೊಂಡು ಅರ್ಧದಿನ ಕಳೆದ್ರೂ, ಅಂಗೈನಲ್ಲಿ ಮಸಾಲೆಯ ಘಮಘಮ ಮೂಗಿಗೆ ಬಡಿಯುತ್ತಿರುತ್ತೆ. ಇಡೀ ಜನುಮವೇ ಸಾರ್ಥಕವೆನಿಸುವಂತಹ ಮೀನಿನ ಮಸಾಲೆಯಿಂದ ಕರಾವಳಿಯಲ್ಲೊಂದು ಕುಟುಂಬ ಹೊಸ ಜನುಮವನ್ನೇ ಪಡೆದುಕೊಂಡಿದೆ.
ಉಡುಪಿಯ ಮಾಲತಿ ಬಿ. ಮೆಂಡನ್ ಮತ್ತು ಬಾಲಕೃಷ್ಣ ಬಿ. ಮೆಂಡನ್ ದಂಪತಿ ಕೈ ಹಾಕಿದ ವ್ಯಾಪಾರದಲ್ಲೆಲ್ಲಾ ಲಾಸ್​ ಮಾಡ್ಕೊಂಡು ಕೊನೆಗೆ ಮೀನೂಟಕ್ಕೆ ಮಸಾಲೆ ತಯಾರು ಮಾಡುವ ಅಂತಾ ಅಖಾಡಕ್ಕಿಳಿದ್ರು. ಪಕ್ಕಾ ಕರಾವಳಿ ಸ್ಟೈಲ್​ನಲ್ಲಿ, ಓಲ್ಡ್​ ನಾಟಿ ಟೇಸ್ಟ್​ ಕೊಟ್ಟು ಮಸಾಲೆ ತಯಾರಿಸಿ ಮಲ್ಪೆ ಬಂದರು ರಸ್ತೆಯ ಮುಂಭಾಗ ಮಾರಾಟಕ್ಕೆ ಇಟ್ರು ನೋಡಿ..ಕುಟುಂಬದ ದೆಸೆಯೇ ಚೇಂಜ್​ ಆಗಿ ಹೋಯ್ತು ..
1ಲಕ್ಷ ರೂ ಸಾಲ ಪಡೆದು ಆರಂಭಿಸಿದ ಉದ್ಯಮ ಮಲ್ಪೆಯಿಂದ ಸಮುದ್ರ ದಾಟಿ ದುಬೈ, ಮಸ್ಕತ್, ಸಿಂಗಾಪುರ, ನ್ಯೂಜಿಲ್ಯಾಂಡ್‌ಗೆ ಹೀಗೆ ವಿಶ್ವದೆಲ್ಲೆಡೆ ಸೌಂಡ್​ ಮಾಡುತ್ತಿದೆ. 12 ಲೀಟರ್‌ನ 9 ಗ್ರೈಂಡರ್ ಬಳಸಿ, ಹತ್ತಾರು ಕೆಲಸಗಾರರನ್ನ ಇಟ್ಟು ಮಸಾಲೆ ರೆಡಿಮಾಡ್ತಿದ್ರು, ಡಿಮ್ಯಾಂಡ್​ ಪೂರೈಸೋದಕ್ಕೆ ದಂಪತಿಗೆ ಸಾಧ್ಯವಾಗ್ತಿಲ್ಲ. ಅಷ್ಟರಮಟ್ಟಿಗೆ ಮಸಾಲೆ ಪರಿಮಳ ಜಗತ್ತಿನೆಲ್ಲೆಡೆ ಹರಡಿದೆ.
ಇನ್ನು ಮೀನಿನ ಮಸಾಲೆ ಉದ್ಯಮ ಇಡೀ ಕುಟುಂಬಕ್ಕೆ ಆಸರೆ ನೀಡಿದಷ್ಟೇ ಅಲ್ಲದೇ ಸಂತೃಪ್ತಿಯನ್ನು ತಂದುಕೊಟ್ಟಿದೆ. ಮಗ, ಮಗಳಿಗೆ ಉತ್ತಮ ಶಿಕ್ಷಣ ನೀಡಿರುವ ಮೆಂಡನ್​ ದಂಪತಿ, ಮಗಳ ಮದುವೆ ಮಾಡಿದ್ದಾರೆ, ಮಗ ಮಣಿಪಾಲದಲ್ಲಿ ಸ್ವತಃ ಕಂಪನಿ ತೆರೆದಿದ್ದಾನೆ. ಇಷ್ಟೆಲ್ಲಾ ತಂದುಕೊಟ್ಟಿರುವ ಮೀನಿನ ಮಸಾಲೆಯ ಜೊತೆ ದಂಪತಿ ಚಿಕನ್ ಪೌಡರ್, ಸಿಗಡಿ ಮಸಾಲೆ, ಮಾರಾಟ, ಚಿಕನ್ ಮಸಾಲೆ, ಪುಳಿಮುಂಚಿ ಮಸಾಲೆ ವ್ಯಾಪಾರಕ್ಕೂ ಇಳಿದಿದ್ದಾರೆ. ಒಟ್ಟಾರೆ, ಕರಾವಳಿಯ ಈ ದಂಪತಿಯ ಸ್ವಾಭಿಮಾನದ ಸಾಧನೆಯ ಸ್ಟೋರಿ ಫಿಶ್​ ಕರಿ ಟೆಸ್ಟ್​​ನಂತೆ ಸಿಹಿ ಸಿಹಿಯಾಗಿದೆ..

Leave a Reply

Your email address will not be published. Required fields are marked *