ಇಂದು 91 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ನವದೆಹಲಿ: ಭಾರೀ ಕುತೂಹಲ ಕೆರಳಿಸಿರುವ 2019ರ ಲೋಕಸಭೆ ಚುನಾವಣೆ ಇಂದಿನಿಂದ ಆರಂಭವಾಗಿದೆ. ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದ ಮತದಾನ ಇಂದು ಶುರುವಾಗಿದೆ. 18 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 91 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಕಟ್ಟುನಿಟ್ಟಿನ ಮತದಾನಕ್ಕೆ ಆಯೋಗ ಕ್ರಮಕೈಗೊಂಡಿದ್ದು, ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್​ಗಢ ಬಿಹಾರ ಮಹಾರಾಷ್ಟ್ರ, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಒಟ್ಟು 91 ಕ್ಷೇತ್ರಗಳಲ್ಲಿ 1285 ಕದನದ ಕಲಿಗಳ ಅದೃಷ್ಟ ಪರೀಕ್ಷೆ ಆರಂಭವಾಗಿದೆ. ಆಂಧ್ರಪ್ರದೇಶ, ಸಿಕ್ಕಿಂ ಹಾಗೂ ಓಡಿಶಾದಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಏಕಕಾಲಕ್ಕೆ ನಡೆಯುತ್ತಿದೆ.. ಇನ್ನೂ ತೆಲಂಗಾಣದಲ್ಲಿ 17 ಕ್ಷೇತ್ರ, ಉತ್ತರಪ್ರದೇಶ 8 ಕ್ಷೇತ್ರ, ಮಹಾರಾಷ್ಟ್ರದ 7 ಕ್ಷೇತ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಮೊದಲ ಹಂತದ ಚುನಾವಣೆ ಇವತ್ತು ನಡೆಯುತ್ತಿದೆ.