ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆ -‘ಕಪ್ಪುಕುಳಿ’ ಫೋಟೋ ರಿಲೀಸ್..!

ವಿಜ್ಞಾನಿ ಅಲ್ಬರ್ಟ್​ ಐನ್​ಸ್ಟೀನ್​ ನಡೆಸಿದ್ದ ಸಂಶೋಧನೆಗಳಲ್ಲಿ ಕೇಂದ್ರ ಬಿಂದುವಾಗಿದ್ದ ಬ್ಲ್ಯಾಕ್​ ಹೋಲ್​ (ಕಪ್ಪುಕುಳಿ)ನ ಮೊದಲ ಚಿತ್ರವನ್ನು ನಾಸಾ ವಿಜ್ಞಾನಿಗಳ ತಂಡ ಬಿಡುಗಡೆ ಮಾಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಬಿಡುಗಡೆಯಾಗಿರುವ ಚಿತ್ರದಲ್ಲಿ ಕೆಂಪು ಜ್ವಾಲೆ ಹಾಗೂ ಹಳದಿ ಬಣ್ಣದಿಂದ ಕಪ್ಪುಕುಳಿ ಕೂಡಿದೆ. ನೆದರ್ಲ್ಯಾಂಡ್​ ದೇಶದ ಱಡ್ ಬೌಂಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಪ್ಪುಕುಳಿಯ ಫೋಟೋ ಸೆರೆ ಹಿಡಿದಿದ್ದಾರೆ. ಇದಕ್ಕಾಗಿ ವಿಶ್ವದ 8 ಅತ್ಯಾಧುನಿಕ ಟೆಲಿಸ್ಕೋಪ್ ಸಹಾಯ ಪಡೆದುಕೊಂಡಿದ್ದಾರೆ.

ಅತಿ ಹೆಚ್ಚಿನ ಗುರುತ್ವಾಕರ್ಷಣಾ ಶಕ್ತಿ ಹೊಂದಿರುವ ಕಪ್ಪುಕುಳಿ ಸೂರ್ಯನ ಬೆಳಕಿನ ಕಿರಣವನ್ನು ತನ್ನೊಳಗೆ ಸೆಳೆದುಕೊಳ್ಳುತ್ತೆ. ಸೂರ್ಯನಿಗಿಂತ ಬರೋಬ್ಬರಿ 6.5 ಬಿಲಿಯನ್ ಪಟ್ಟು ದೊಡ್ಡದಾಗಿದ್ದು, ಇಡೀ ಸೌರವ್ಯೂಹಕ್ಕಿಂತಲೂ ಊಹಿಸಲಾಗದಷ್ಟು ದೊಡ್ಡದಿದೆ ಅಂತಾ ಅಮೆರಿಕದ ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ಕಪ್ಪುಕುಳಿಯ ಬಗ್ಗೆ ಮಾಹಿತಿ ನೀಡಿದ್ದರು. ಆದ್ರೆ ಬಳಿಕ ಸಾಕಷ್ಟು ವಿಜ್ಞಾನಿಗಳು ಸಂಶೋಧನೆ ಕೈಗೊಂಡರೂ ಕಪ್ಪುಕುಳಿಯ ಬಗ್ಗೆ ಯಶಸ್ವಿ ಅಧ್ಯಯನ ನಡೆಸಲು ಸಾಧ್ಯವಾಗಿರಲಿಲ್ಲ. ಕೊನೆಗೂ ಖಗೋಳ ವಿಜ್ಞಾನಿಗಳ ದಶಕಗಳ ಪರಿಶ್ರಮದಿಂದ ನಿಜವಾದ ಫೋಟೋ ಲಭ್ಯವಾಗಿದೆ. ಈ ಮೂಲಕ ಕಪ್ಪುಕುಳಿ ಹೇಗಿರುತ್ತೆ ಅನ್ನೋ ಕುತೂಹಲಕ್ಕೆ ತೆರೆಬಿದ್ದಿದೆ. ಖಗೋಳ ವಿಜ್ಞಾನಿಗಳು ಬಿಡುಗಡೆಗೊಳಿಸಿರುವ ಚಿತ್ರದಲ್ಲಿ ಎಂ87 ಎಂಬ ಗ್ಯಾಲಕ್ಸಿಯಿಂದ 50 ಮಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿ ಕಪ್ಪುಕುಳಿ ಕಂಡು ಬಂದಿದೆ.