ಪ್ರಥಮ ಚಿಕಿತ್ಸೆ ಮಾಡುವಾಗ ಇದನ್ನ ನೆನಪಿಟ್ಟುಕೊಳ್ಳಿ..!

ಸಾಮಾನ್ಯವಾಗಿ ಮನೆ ಸುತ್ತಮುತ್ತ ಅಥವಾ ಬೇರೆಲ್ಲಾದ್ರೂ ಬಿದ್ದು ಗಾಯವಾದಾಗ ಅಥವಾ ಕಡಿತ ಉಂಟಾದಾಗ ತಕ್ಷಣಕ್ಕೆ ಯಾವ ಡಾಕ್ಟರ್​ ಸಿಗೋದಿಲ್ಲ. ಹೆಚ್ಚಾಗಿ ಮಕ್ಕಳು ಆಟವಾಡುವಾಗ ಬಿದ್ದು ಗಾಯ ಮಾಡಿಕೊಳ್ಳುತ್ತಾರೆ. ಅದಕ್ಕೆ ಪರ್ಯಾಯವಾಗಿ ಟಿಂಚರ್​, ಬ್ಯಾಂಡೇಡ್​, ಬ್ಯಾಂಡೇಜ್​ ಮತ್ತು ಕ್ರೀಮ್​ಗಳನ್ನ ಮನೆಯಲ್ಲಿ ರೆಡಿಯಾಗಿ ಇಟ್ಟುಕೊಳ್ಳಬೇಕು. ಮೊದಲು ಪ್ರಥಮ ಚಿಕಿತ್ಸೆ ಮಾಡಿಕೊಂಡು ನಂತರ ಮೇಜರ್​ ಇಂಜುರಿ ಆಗಿದ್ರೆ ಆಸ್ಪತ್ರೆಗೆ ತೆರೆಳಬೇಕು. ಪ್ರಥಮ ಚಿಕಿತ್ಸೆ ಮಾಡುವಾಗ ಜಾಗೃತವಾಗಿ ಮಾಡದಿದ್ದರೆ ಮುಂದೆ ತೊಂದರೆ ಎದುರಿಸಬೇಕಾದಿತು. ಪ್ರಥಮ ಚಿಕಿತ್ಸೆ ಮಾಡುವಾಗ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಅಂತ ನಾವ್‌ ಹೇಳ್ತೀವಿ ಕೇಳಿ.

ಗಾಯಕ್ಕೆ ಔಷಧಿ ಹಚ್ಚುವ ಮೊದಲು ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಕೈಯಲ್ಲಿರುವ ಕೀಟಾಣುಗಳಿಂದ ಇನ್ಫೆಕ್ಷನ್​ ಆಗುವ ಸಾಧ್ಯತೆ ಹೆಚ್ಚು.
ಮಕ್ಕಳು ಆಟವಾಡುವಾಗ ಬಿದ್ದು ಗಾಯಗೊಳ್ಳುತ್ತಾರೆ. ಮರಳು ಅಥವಾ ಮಣ್ಣಿನ ಕಣಗಳು ಗಾಯದ ಜೊತೆಗೆ ಸೇರಿಕೊಂಡಿರುತ್ತವೆ. ಆದರಿಂದ ಮೊದಲು ಟಿಂಚರ್​ ಬಳಸಿ ಗಾಯವನ್ನು ಕ್ಲೀನ್​ ಮಾಡಿಕೊಂಡು ನಂತರ ಔಷಧಿ ಹಚ್ಚಿ.
ಗಾಯ ಮತ್ತು ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸಿ. ಉಗುರು ಬೆಚ್ಚಗಿನ ನೀರು ಜೊತೆಗೆ ಸ್ವಾಫ್ಟ್​ ಕಾಟನ್​ ಬಳಸಿ ಗಾಯವಾದ ಜಾಗವನ್ನು ಶುದ್ಧೀಕರಿಸಿ.
ಕೆಲವೊಂದು ಸಲ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ. ಆದರಿಂದ ಬಿದ್ದ ಜಾಗವನ್ನು ಸರಿಯಾಗಿ ತಿಕ್ಕಿ ನಂತರ ನೀರಿನ ಶಾಖ ನೀಡಿ.
ಗಾಯವಾದ ಜಾಗದಲ್ಲಿ ರಕ್ತ ಸೋರುತ್ತಿದ್ದರೆ, ಆ ಜಾಗವನ್ನು ಗಟ್ಟಿಯಾಗಿ ಹಿಡಿದು ರಕ್ತ ಸೋರದಂತೆ ನೊಡಿಕೊಳ್ಳಿ. ರಕ್ತ ಸೋರುವುದು ನಿಂತ ನಂತರ ಪ್ರಥಮ ಚಿಕಿತ್ಸೆ ಮಾಡಿ.
ಗಾಯದ ಸುತ್ತಲಿನ ಉಡುಪುಗಳನ್ನು ಕತ್ತರಿಸಿ ಅಥವಾ ತೆಗೆದು ಹಾಕಿ.
ಹೆಚ್ಚಾಗಿ ರಕ್ತ ಸ್ರಾವ ಆಗುತ್ತಿದ್ದರೆ, ಕಾಟನ್​ ಬಳಸಿ ಗಾಯವನ್ನು ಎಚ್ಚರಿಕೆಯಿಂದ ಸ್ವಚ್ಛಗೊಳಿಸಿ.
ಗಾಯ ಕೊಳಕು ಅಥವಾ ತುಕ್ಕು ಹಿಡಿದ ವಸ್ತುವಿನಿಂದ ಉಂಟಾಗಿದ್ದರೆ, ಟೆಟಾನಸ್ ಟಾಕ್ಸಾಯಿಡ್ ಚುಚ್ಚುಮದ್ದನ್ನ ಅಗತ್ಯವಾಗಿ ಕೊಡಿಸಬೇಕು.
ಬಿದ್ದು ಗಾಯವಾದ ಸಂದರ್ಭದಲ್ಲಿ ಮೂಳೆಯಲ್ಲಿ ನೋವು ಕಾಣಿಸಿಕೊಂಡಲ್ಲಿ ಅಥವಾ ಮೂಳೆ ಮುರಿತ ಉಂಟಾದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ವಿಶೇಷ ಬರಹ – ಶ್ವೇತಾ ಪೂಜಾರಿ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv