ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ಅರ್ಚಕ: ಗಂಭೀರ ಗಾಯ

ರಾಮನಗರ: ರಾಜ್ಯದ ನಾನಾ ಭಾಗಗಳಲ್ಲಿ ದೇವಸ್ಥಾನಗಳ ಎದುರು ಕೊಂಡ ಹಾಯುವ ವೇಳೆ ಅವಘಡಗಳು ಸಂಭವಿಸುವುದು ಮುಂದುವರೆದಿದೆ. ಅರ್ಚಕರೋ ಅಥವಾ ಭಕ್ತರೋ ಈ ಬೆಂಕಿ ಕೊಂಡದಲ್ಲಿ ಆಯ ತಪ್ಪಿ ಬಿಳುವುದು, ಅನಾಹುತಗಳನ್ನು ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಇನ್ನಾದರೂ ಜಾಗ್ರತೆ ವಹಿಸಬೇಕು.

ಈ ಮಧ್ಯೆ ಏನಾಗಿದೆ ಅಂದ್ರೆ, ರಾಮನಗರದಲ್ಲಿ ಪ್ರಧಾನ ಅರ್ಚಕರೊಬ್ಬರು ಕೊಂಡ ಹಾಯುವಾಗ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಜಿಲ್ಲೆಯ ಅವ್ವೇರಹಳ್ಳಿ ಎಸ್​​ಆರ್​ಎಸ್​ ಬೆಟ್ಟದಲ್ಲಿ ರೇವಣಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.
ಪ್ರಧಾನ ಅರ್ಚಕ ವಿಜಯ್​ ಕುಮಾರ್ ಅವರು ಕೊಂಡ ಹಾಯುತ್ತಿದ್ದ ವೇಳೆ ​ಆಯತಪ್ಪಿ ಬಿದ್ದಿದ್ದಾರೆ. ಈ ವೇಳೆ ಅವರ ಸಹಾಯಕ್ಕೆ ದೌಡಾಯಿಸಿದ ಇನ್ನಿಬ್ಬರು ಅರ್ಚಕರು ಕೂಡ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರಗೆ ದಾಖಲಿಸಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv