ಮನೆಯಲ್ಲಿ ‘ಅನುಮಾನದ ಬೆಂಕಿ’: ಗಾಯಾಳು ದಂಪತಿ ಸಾವು

ಕಲಬುರ್ಗಿ: ನಿನ್ನೆ ಮನೆಯಲ್ಲಿ ಅನುಮಾನಸ್ಪಾದವಾಗಿ ಬೆಂಕಿ ಹೊತ್ತಿಕೊಂಡು ಗಾಯಗೊಂಡಿದ್ದ ದಂಪತಿ ಸಾವನ್ನಪ್ಪಿದ್ದಾರೆ. ನಗರದ ಎಂಎಸ್​ಕೆ ಮಿಲ್​ನ ಇಕ್ಬಾಲ್ ಕಾಲೋನಿಯಲ್ಲಿ ಘಟನೆ ನಡೆದಿತ್ತು. ಅಕ್ಬರ್ (37) ಹಾಗೂ ಶನ್ನು (35) ಮೃತ ದುರ್ದೈವಿಗಳು. ಮನೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಗಾಯಾಳುಗಳನ್ನ ನಗರದ ಬಸವೇಶ್ವರ ಆಸ್ಪತ್ರೆಗೆ ರವಾನಿಸಿದ್ದಾರೆ.

ಆದರೆ ಇಂದು ಗಾಯಾಳು ದಂಪತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇನ್ನು, ಮಕ್ಕಳಾದ ಮಹ್ಮದ್ ಯಾಸಿನ್ (12) ಹಾಗೂ ಸಾನಿಯಾ (10) ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಕಾರಣ ಏನೆಂದು ಇದುವರೆಗೂ ತಿಳಿದುಬಂದಿಲ್ಲ.

ಮನೆಯಲ್ಲಿ ಅನುಮಾನದ ಬೆಂಕಿ
ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಘಟನೆ ಸಂಭವಿಸಿರಬಹುದೆಂದು ಶಂಕಿಸಲಾಗಿತ್ತು. ಆದರೆ ಮೃತ ಅಕ್ಬರ್​ನ ತಂಗಿ ಹೀನಾಳ ಗಂಡ ಮುಸ್ತಫಾನೇ ಬೆಂಕಿ ಹಚ್ಚಿದ್ದಾಗಿ ಆರೋಪಿಸಿರುವ ಮೃತರ ಕುಟುಂಬಸ್ಥರು, ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv