ಕಿಡಿಗೇಡಿಗಳಿಂದ ಸೂಳೆಕೆರೆ ಅರಣ್ಯಕ್ಕೆ ಬೆಂಕಿ

ದಾವಣಗೆರೆ: ನಲ್ಲೂರು ವ್ಯಾಪ್ತಿಯ ಸೂಳೆಕೆರೆ ಅರಣ್ಯ ಪ್ರದೇಶದ ಸೂಳೆಕೆರೆ ಗುಡ್ಡ ಬೆಂಕಿಗಾಹುತಿಯಾಗಿದೆ. ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಇಡೀ ಸೂಳೆಕೆರೆ ಗುಡ್ಡ ಹೊತ್ತಿ ಹುರಿದಿದೆ. ಬೆಂಕಿಯ ಕೆನ್ನಾಲಿಗೆಗೆ ಗಿಡಮರಗಳು ಸುಟ್ಟು ಕರಕಲಾಗಿವೆ. ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಫಸ್ಟ್ ನ್ಯೂಸ್ ವರದಿಗಾರರೂ ಬೆಂಕಿ ನಂದಿಸಲು ಹರಸಾಹಸಪಟ್ಟರು.