‘MV SSL Kolkata’ ನೌಕೆ ಧಗಧಗ: ಬೆಂಕಿ ಹೊತ್ತಿಕೊಂಡ ವಿಡಿಯೋ ವೈರಲ್..!

ಕೋಲ್ಕತ್ತ: ಎಂವಿ ಎಸ್​ಎಸ್​ಎಲ್​ ಕೊಲ್ಕತ್ತ ನೌಕೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಪಶ್ಚಿಮ ಬಂಗಾಳದ ಹಲ್ಡಿಯಾ ಬಂದರಿಂದ ಸರಕುಗಳನ್ನು ಕೊಂಡೊಯ್ಯುತ್ತಿದ್ದ ವೇಳೆ  ಬೆಂಕಿ ಕಾಣಿಸಿಕೊಂಡಿತ್ತು.

ಕೂಡಲೇ ಹಡಗಿನಲ್ಲಿದ್ದ ಸಿಬ್ಬಂದಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಕೋಸ್ಟ್ ಗಾರ್ಡ್​ ಸಿಬ್ಬಂದಿ, ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅಲ್ಲದೇ ಹಡಗಿನಲ್ಲಿದ್ದ 22 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಬೆಂಕಿಯ ಆರ್ಭಟಕ್ಕೆ ಎಂವಿ ಎಸ್​ಎಸ್​ಎಲ್ ನೌಕೆ ಶೇಕಡಾ 70 ರಷ್ಟು ಸುಷ್ಟು ಹೋಗಿದೆ. ಬೆಂಕಿ ಹತ್ತಿಕೊಂಡು ಉರಿಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv