ಹುಬ್ಬಳ್ಳಿ ಪಾಲಿಕೆ ಕಚೇರಿಯಲ್ಲಿ ಬೆಂಕಿ: ಇದು ಉದ್ದೇಶಪೂರ್ವಕ ಕೃತ್ಯವೇ?

ಹುಬ್ಬಳ್ಳಿ: ಹುಬ್ಬಳ್ಳಿ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿ, ಕಡತಗಳು ಸುಟ್ಟು ಕರಕಲಾಗಿವೆ. ಇಂದು ಬೆಳಗಿನ ಜಾವ ಪಾಲಿಕೆಯ ಸೂಪರಿಡೆಂಟ್‌ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಮುಖವಾದ ಕಡತಗಳು ಬೆಂಕಿಗಾಹುತಿಯಾಗಿವೆ.
ಅಗ್ನಿ ಅವಘಡದ ಬಗ್ಗೆ ಸಂಶಯ ಮೂಡಿದ್ದು, ಉದ್ದೇಶಪೂರ್ವಕವಾಗಿಯೇ ಪಾಲಿಕೆಯ ಕಡತವಿರುವ ಕಚೇರಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದೆ. ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಹೊಂದಾಣಿಕೆ ಕೊರತೆಯ ಹಿನ್ನೆಲೆಯಲ್ಲಿ, ಪಾಲಿಕೆಯ ಕಚೇರಿ ಕಡತಗಳಿಗೆ ಯಾರಿಂದಲೋ ಬೆಂಕಿ ಹಚ್ಚಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಘಟನೆಯಲ್ಲಿ ಪಾಲಿಕೆಯ ಅನೇಕ ಕಡತಗಳು ಹಾಗೂ ಕಚೇರಿಯ ಪೀಟೋಪಕರಣಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳ ಹಾಗೂ ಹುಬ್ಬಳಿ ಉಪನಗರ ಠಾಣೆಯ ಪೊಲೀಸರು ಬೆಂಕಿಯನ್ನು ನಂದಿಸಿದ್ದಾರೆ. ಘಟನೆ ಕುರಿತು ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

   

 

  ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv