ಬಂಡೀಪುರ ಉಳಿಸ್ತೀವಿ ಅಂತಾ ಯಾರಾದರೂ ಹಣ ಕೇಳ್ತಿದ್ದಾರಾ? ಹುಷಾರ್​

ಬೆಂಗಳೂರು: ಕಾಡ್ಗಿಚ್ಚು ಕಾಣಿಸಿಕೊಂಡಿದ್ದಾಗ ಬಂಡೀಪುರದ ಅಭಯಾರಣ್ಯದ ಸಿಬ್ಬಂದಿ, ಬೆಂಕಿ ನಂದಿಸುವ ಸಿಬ್ಬಂದಿಗೆ ಅಗತ್ಯವಸ್ತುಗಳನ್ನ ನೀಡುವಂತೆ ಮನವಿ ಮಾಡಿದ್ದು ನಿಜ. ಅದನ್ನೆ ಬಳಸಿಕೊಂಡು ಇದೀಗ ಬಂಡೀಪುರದ ರಾಷ್ಟ್ರೀಯ ಉದ್ಯಾನವನ್ನು ಮರುಸ್ಥಾಪನೆ ಮಾಡ್ತೀವಿ ಅಂತಾ ಸಾರ್ವಜನಿಕರಿಂದ ಹಣ ಪೀಕಲಾಗುತ್ತಿದೆಯಂತೆ. ಹಿಗೋಂದು ವೇಳೆ ಯಾರಾದರೂ ಹಣ ಕೇಳಿದರೇ ನೀಡಬೇಡಿ. ಯಾವುದೇ ರೀತಿಯ ನೆರವನ್ನು ಪಡೆದುಕೊಳ್ಳುವ ಜವಾಬ್ದಾರಿಯನ್ನು ಯಾವುದೇ ಸಂಸ್ಥೆಗೆ ನಾವು ವಹಿಸಿಲ್ಲ. ಹಾಗೂ ಇಲಾಖೆಯು ಸಹ ಇಂತಹ ಯಾವುದೇ ನೆರವನ್ನು ಸ್ವೀಕರಿಸುತ್ತಿಲ್ಲ ಅಂತಾ ಕರ್ನಾಟಕ ಅರಣ್ಯ ಇಲಾಖೆ ಸ್ಪಷ್ಟ ಪಡಿಸಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಇಲಾಖೆ, ತನ್ನ ಅಧಿಕೃತ ಟ್ವೀಟರ್​ ಖಾತೆಯಲ್ಲಿ ಪೋಸ್ಟ್​ವೊಂದನ್ನು ಪ್ರಕಟಿಸಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv