ಬಜೆಟ್‌ನಲ್ಲಿ 90 ಮೀ. ಹೈಡ್ರಾಲಿಕ್ ಲ್ಯಾಡರ್ ಖರೀದಿಗೆ ಅಸ್ತು! ಏನಿದರ ಸ್ಪೆಷಾಲಿಟಿ?

ಬೆಂಗಳೂರು: ಈ ಬಾರಿಯ ಬಜೆಟ್‌ನಿಂದ ಅಗ್ನಿಶಾಮಕ ದಳ ಇಲಾಖೆಗೆ ಆನೆ ಬಲ ಸಿಕ್ಕಿದೆ. ಯಾಕಂದ್ರೆ, ಇಲಾಖೆ ಹಲವು ದಿನಗಳಿಂದ ಕಾಯುತ್ತಿದ್ದ ಹೈಡ್ರಾಲಿಕ್‌ ಲ್ಯಾಡರ್‌ ಖರೀದಿಸಲು ಬಜೆಟ್‌ನಲ್ಲಿ ಪ್ರಸ್ತಾಪವಾಗಿದೆ. ಹಾಗಾದ್ರೆ, ಏನದು 90 ಮೀಟರ್‌ ಹೈಡ್ರಾಲಿಕ್ ಮೀಟರ್ ಲ್ಯಾಡರ್‌? ಏನಿದರ ವಿಶೇಷತೆಗಳು..?

ಏನಿದು 90 ಮೀ. ಹೈಡ್ರಾಲಿಕ್ ಮೀಟರ್ ಲ್ಯಾಡರ್!!
ಅಗ್ನಿ ಅವಘಡಗಳು ಸಂಭವಿಸಿದ್ರೆ ಬೆಂಕಿ ನಂದಿಸಲು ಲ್ಯಾಡರ್‌ಗಳ ಅವಶ್ಯಕತೆ ಬಹುಮುಖ್ಯ. ಅದರಲ್ಲೂ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿದ್ರೆ ಬೆಂಕಿ ನಂದಿಸೋದು ತುಸು ತ್ರಾಸವೇ. ಯಾಕಂದ್ರೆ, ನಮ್ಮ ಇಲಾಖೆಯಲ್ಲಿ ದೊಡ್ಡ ಲ್ಯಾಡರ್‌ಗಳು ಇಲ್ಲ. ಹೀಗಾಗಿ ಪ್ರತಿ ಬಾರಿಯೂ ಅಗ್ನಿ ಶಾಮಕದಳ ಸಿಬ್ಬಂದಿ ದೊಡ್ಡ ಕಟ್ಟಡಗಳಲ್ಲಿ ಬೆಂಕಿ ಅವಘಡ ಸಂಭವಿಸಿದ್ರೆ ಹರಸಾಹಸ ಪಡುತ್ತಿದ್ರು. ಆದ್ರೆ, ಇನ್ಮುಂದೆ ಅವರಿಗೆ ಈ ದೊಡ್ಡ ಚಿಂತೆ ಇರೋದಿಲ್ಲ. ಯಾಕಂದ್ರೆ, ಸದ್ಯದಲ್ಲಿಯೇ ಅಗ್ನಿ ಶಾಮಕ ದಳಕ್ಕೆ 90 ಮೀ. ಹೈಡ್ರಾಲಿಕ್‌ ಮೀಟರ್‌ಲ್ಯಾಡರ್ ಬರಲಿದೆ.

ಅಂದ್ಹಾಗೇ, 90 ಮೀ. ಹೈಡ್ರಾಲಿಕ್‌ ಮೀಟರ್‌ಲ್ಯಾಡರ್ ಪ್ರಪ್ರಥಮ ಬಾರಿಗೆ ಫಿನ್‌ಲ್ಯಾಂಡ್‌ನಿಂದ ಆಮದು ಮಾಡಿಕೊಂಡಿತ್ತು ಮುಂಬೈ ಅಗ್ನಿಶಾಮಕ ದಳ. 90. ಮೀ. ಹೈಡ್ರಾಲಿಕ್‌ಲ್ಯಾಡರ್‌ನ ಬೆಲೆ ಬರೋಬ್ಬರಿ ₹ 16 ಕೋಟಿ. 2015 ರಲ್ಲಿಯೇ ಮುಂಬೈನ ಅಗ್ನಿ ಶಾಮಕ ದಳ ಈ ಲ್ಯಾಡರ್‌ ಅನ್ನು ಆಮದು ಮಾಡಿಕೊಂಡಿತ್ತು. ಸದ್ಯ ಇದೇ ರೀತಿಯಾದ ಲ್ಯಾಡರ್​​​ ಅನ್ನ ಕರ್ನಾಟಕಕ್ಕೂ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬಜೆಟ್‌ನಲ್ಲಿ ಈ ವಾಹನ ಖರೀದಿಗಾಗಿ ಹಣ ಮೀಸಲಿಡಲಾಗಿದೆ.

ಸುನಿಲ್ಅಗರ್ ವಾಲ್ ವರದಿ ಇಂಪ್ಯಾಕ್ಟ್‌!
ಅಂದ್ಹಾಗೆ, ಈ ಲ್ಯಾಡರ್ ಕರ್ನಾಟಕಕ್ಕೆ ಎಷ್ಟು ಮುಖ್ಯ ಅನ್ನೋದ್ರ ಕುರಿತು ಅಗ್ನಿ ಶಾಮಕದಳದ ಎಡಿಜಿಪಿ ಸುನಿಲ್ ಅಗರ್​​​​ವಾಲ್ ಮುಂಬೈಗೆ ತೆರಳಿ ಅಧ್ಯಯನ ನಡೆಸಿದ್ದರು. ಮುಂಬೈ ತೆರಳಿದ್ದ ಸುನಿಲ್‌ ಅಗರ್​​​​ವಾಲ್​​​​, 90 ಮೀ. ಹೈಡ್ರಾಲಿಕ್‌ಲ್ಯಾಡರ್‌ನ ಬಗ್ಗೆ ಇಂಚಿಂಚೂ ಮಾಹಿತಿಯನ್ನು ಕಲೆ ಹಾಕಿದ್ದರು. ಮುಂಬೈನಲ್ಲಿ ನಡೆದ ಟೆಕ್ನಿಕಲ್ ಮೀಟಿಂಗ್​​​ನಲ್ಲಿ ಭಾಗವಹಿಸಿದ್ದ ಸುನಿಲ್ ಅಗರ್‌ವಾಲ್‌, ಬಳಿಕ ಈ ವಾಹನ ರಾಜ್ಯ ಅಗ್ನಿ ಶಾಮಕ ದಳ ಇಲಾಖೆಗೆ ಎಷ್ಟು ಮುಖ್ಯ? ಇದರ ಅವಶ್ಯಕತೆ ಎಷ್ಟಿದೆ ? ಅನ್ನೋದರ ಬಗ್ಗೆ ಅಗ್ನಿಶಾಮಕ ಇಲಾಖೆಯ ಡಿಜಿಪಿ ಎಂ.ಎನ್.ರೆಡ್ಡಿ ಕಂಪ್ಲೀಟ್ ರಿಪೋರ್ಟ್‌ಕೊಟ್ಟಿದ್ದರು.

ಹೈಡ್ರಾಲಿಕ್‌ಮೀಟರ್‌ ಲ್ಯಾಡರ್‌ನ ವಿಶೇಷತೆಗಳೇನು?
ಕರ್ನಾಟದ ಕೆಲ ಬಹು ಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದಲ್ಲಿ ಈಗಿರುವ ಟೆಕ್ನಾಲಜಿಯನ್ನ ಉಪಯೋಗಿಸಿ ಬೆಂಕಿ ನಂದಿಸುವುದು ಅಸಾಧ್ಯ. ಹೀಗಾಗಿ ಈ 90 ಮೀಟರ್ ಲ್ಯಾಡರ್ ಕರ್ನಾಟಕಕ್ಕೆ ತಂದಲ್ಲಿ ಸುಲಭವಾಗಿ ಬೆಂಕಿ ನಂದಿಸಬಹುದು. ಉದಾಹರಣೆಗೆ ಕೆಲ ಬಹು ಮಹಡಿ ಕಟ್ಟಡ ಅಂದ್ರೆ, 20ನೇ ಮಹಡಿ ಅಥವಾ 30ನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದಲ್ಲಿ ತಕ್ಷಣ ಅಗ್ನಿ ಶಾಮಕದಳ, ಈ ಲ್ಯಾಡರ್ ಮೂಲಕ ಕೂಡಲೇ ಬೆಂಕಿ ನಂದಿಸಬಹುದು. ಹೀಗಾಗಿ ಇದರ ವರದಿಯನ್ನ ಎಡಿಜಿಪಿ ಸುನಿಲ್ ಅಗರ್​​ವಾಲ್ ಡಿಜಿಪಿ ಎಂ.ಎನ್. ರೆಡ್ಡಿ ಮೂಲಕ ಸಿಎಂ ಹಾಗೂ ಗೃಹ ಮಂತ್ರಿಗೆ ವರದಿಯನ್ನ ತಲುಪಿಸಿದ್ರು. ಈ ಮೂಲಕ ಇಂದು ನಡೆದ ಬಜೆಟ್ ನಲ್ಲಿ ಅಗ್ನಿ ಶಾಮಕದಳಕ್ಕೆ ಏರಿಯಲ್ ಲ್ಯಾಡರ್ ಫ್ಲಾಟ್ ಫಾರ್ಮ್ ವಾಹನ ಖರೀದಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಈ ಮೂಲಕ ಇಲಾಖೆಗೆ ಬೇಕಿದ್ದ ಬಹು ಮುಖ್ಯ ವಾಹನವೊಂದನ್ನ ಖರೀದಿಸಲು ರಾಜ್ಯ ಸರ್ಕಾರ ತನ್ನ ಬಜೆಟ್ ಮೂಲಕ ಅಸ್ತು ಅಂದಿದೆ.

 ಕರ್ನಾಟಕ ರಾಜ್ಯದ ಅಗ್ನಿ ಶಾಮಕ ದಳ ಆಧುನೀಕರಣಕ್ಕೆ ಮತ್ತಷ್ಟು ಇಂಬು ಸಿಕ್ಕಿದೆ. ಇದುವರೆಗೂ, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿದ್ರೆ ಜನಸಾಮಾನ್ಯರ ಸುರಕ್ಷತೆ ತ್ರಾಸದಾಯವಾಗಿತ್ತು. ನಮ್ಮ ಇಲಾಖೆಯಲ್ಲಿ ದೊಡ್ಡ ಲ್ಯಾಡರ್‌ಗಳು ಇರಲಿಲ್ಲ. ಆದ್ರೆ ಇಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಜನರ ಬಗ್ಗೆ ಅಪಾರ ಕಾಳಜಿ ವ್ಯಕ್ತಪಡಿಸುತ್ತಾ,  ಬೃಹತ್ ಹೈಡ್ರಾಲಿಕ್‌ಮೀಟರ್‌ ಲ್ಯಾಡರ್‌ಗಳ ಖರೀದಿಗೆ ಅನುದಾನ ನೀಡಿದ್ದಾರೆ. ಇದು ನಿಜಕ್ಕೂ ನಮ್ಮ ಬೆಂಗಳೂರು ಜನತೆಗೆ ಹೆಮ್ಮೆಯ ವಿಚಾರವಾಗಿದೆ

-ಸುನಿಲ್ ಅಗರ್​​​​ವಾಲ್, ಎಡಿಜಿಪಿ, ಕರ್ನಾಟಕ ಅಗ್ನಿ ಶಾಮಕದಳ


ವಿಶೇಷ ವರದಿ: ಪಲ್ಲವಿ ಗೌಡ


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv