ಪ್ಯಾರಿಸ್​ನಲ್ಲಿ ಧಗಧಗನೆ ಹೊತ್ತಿ ಉರಿದ ಐತಿಹಾಸಿಕ ಕಟ್ಟಡ

ಪ್ಯಾರಿಸ್​ನ ಪ್ರಸಿದ್ಧ​ ನೊಟ್ರೆ ಡೇಮ್ ಕ್ಯಾಥೆಡ್ರಲ್​ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇದಕ್ಕಿದ್ದಂತೆ ಕಟ್ಟಡದ ಮೇಲ್ಛಾವಣಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಲ್ಲದೇ ಭಾರೀ ಪ್ರಮಾಣದ ಹೊಗೆ ಆಕಾಶದೆತ್ತರಕ್ಕೆ ಚಾಚಿಕೊಂಡಿತ್ತು. ಈ ವೇಳೆ ಕಟ್ಟಡದಲ್ಲಿ ನೂರಾರು ಪ್ರವಾಸಿಗರಿದ್ದರು. ತಕ್ಷಣ ಅವರನ್ನು ಅಲ್ಲಿಂದ ಸ್ಥಳಾಂತರಿಸಿದ ಕಾರಣ ಎಲ್ಲರೂ ಸುರಕ್ಷಿತರಾಗಿದ್ದಾರೆ. ಇನ್ನು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರಿಸ್ತ ಶಕ 1160 ಮತ್ತು ಕ್ರಿಸ್ತ ಶಕ 1260ರ ನಡುವಿನ ಅವಧಿಯಲ್ಲಿ ಈ ಕ್ಯಾಥೆಡ್ರಲ್ ನಿರ್ಮಾಣಗೊಂಡಿದೆ. ಇದರ ಮೇಲ್ಛಾವಣಿಯಲ್ಲಿ ಕೆಲವು ತಿಂಗಳಿನಿಂದ ದುರಸ್ತಿ ಕಾರ್ಯ ನಡೆಯುತ್ತಿತ್ತು. ಇನ್ನು ಈ ಬೆಂಕಿ ಅವಘಡಕ್ಕೆ ಕಾರಣ ಏನು ಅನ್ನೋದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸ್ತಿದ್ದಾರೆ.