ಧಗಧಗನೆ ಹೊತ್ತಿ ಉರಿದ ಕೆಮಿಕಲ್ ಫ್ಯಾಕ್ಟರಿ

ಬೆಂಗಳೂರು:ನೋಡುತ್ತಿದ್ದಂತೆ ಕೆಮಿಕಲ್ ಫ್ಯಾಕ್ಟರಿ ಧಗಧಗನೆ ಹೊತ್ತಿ ಉರಿದ ಘಟನೆ ಲಗ್ಗೆರೆ ಬಳಿಯ ಎಂಇಐ ಕಾಲೋನಿಯಲ್ಲಿ ನಡೆದಿದೆ. ಚಪ್ಪಲಿ ತಯಾರಿಸುವ ಸಂಸ್ಥೆಗೆ, ಈ ಫ್ಯಾಕ್ಟರಿ ಕೆಮಿಕಲ್ ಪೂರೈಕೆ ಮಾಡುತ್ತಿತ್ತು. ರಾತ್ರಿ ಒಂದುವರೆ ಗಂಟೆಗಳ ಕಾಲ ಕೆಮಿಕಲ್ ‌ಫ್ಯಾಕ್ಟರಿ ಹೊತ್ತಿ ಉರಿದಿದೆ. ರಾತ್ರಿ 9 ಗಂಟೆಯಿಂದ 10.30ರವರೆಗೂ ಕಟ್ಟಡದಲ್ಲಿ ಬೆಂಕಿ ಆವರಿಸಿತ್ತು. ಘಟನಾ ಸ್ಥಳಕ್ಕೆ 50ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಶಂಕೆ ವ್ಯಕ್ತವಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv