ಆಕಸ್ಮಿಕ ಬೆಂಕಿಗೆ ಎರಡು ಹಸು ಬಲಿ

ಚಾಮರಾಜನಗರ: ಆಕಸ್ಮಿಕ ಬೆಂಕಿ ತಗುಲಿ ಎರಡು ಹಸುಗಳು ಸಂಜೀವ ದಹನವಾಗಿರುವ ಘಟನೆ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ನಡೆದಿದೆ. ಚಿಕ್ಕಣ್ಣ ಎಂಬುವವರು ನಿನ್ನೆ ರಾತ್ರಿ ಐದು ಹಸುಗಳನ್ನ ತಮ್ಮ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಆ ವೇಳೆ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದೆ. ಬೆಂಕಿಯ ತೀವ್ರತೆಗೆ ಎರಡು ಹಸುಗಳು ಸಂಜೀವವಾಗಿ ದಹನವಾಗಿವೆ. ಇನ್ನುಳಿದ ಮೂರು ಹಸುಗಳನ್ನ ಚಿಕ್ಕಣ್ಣ ರಕ್ಷಿಸಿದ್ದಾರೆ. ಈ ವೇಳೆ ಚಿಕ್ಕಣ್ಣ ಅವರಿಗೂ ತೀವ್ರ ಗಾಯವಾಗಿದೆ. ಅವರನ್ನ ಯಳಂದೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *