ಹಣ, ಱಲಿಯಿಂದ ಜನರನ್ನು ತಲುಪ್ಪುತ್ತೇವೆ ಎಂಬುದು ತಪ್ಪು: ಉಪೇಂದ್ರ

ಹುಬ್ಬಳ್ಳಿ: ಜನಪ್ರತಿನಿಧಿಗಳ ಆಯ್ಕೆ ಮಾಡುವ ಮತ್ತು ಕೆಳಗಿಳಿಸುವ ಅಧಿಕಾರ ಜನರ ಕೈಗೆ ಕೊಟ್ಟಿದ್ದೇವೆ. ಇದೇ ವಿಚಾರಧಾರೆ ಇಟ್ಟುಕೊಂಡು ಈಗ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಉತ್ತಮ ಪ್ರಜಾಕೀಯಾ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಲೋಕಸಭಾ ಚುನಾವಣೆಗೆ 22 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ಈ ಬಾರಿ ಸೂಕ್ತ ಅಭ್ಯರ್ಥಿ ಸಿಗದ ಕಾರಣ ಬಳ್ಳಾರಿಯಲ್ಲಿ ನಿಲ್ಲಿಸಲು ಆಗಲಿಲ್ಲ. ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸಂತೋಷ ನಂದೂರ ಕಣದಲ್ಲಿ ಇದ್ದಾರೆ. ಪ್ರಜಾಕೀಯಾ ಅಭ್ಯರ್ಥಿಗಳನ್ನು ಜನರೇ ಆಯ್ಕೆ ಮಾಡುತ್ತಾರೆ. ಅಭ್ಯರ್ಥಿಯ ಪ್ರಮೋಷನ್, ರಿಜೆಕ್ಷನ್ ಕೂಡಾ ಜನರೇ ಮಾಡುತ್ತಾರೆ. ಹಣ, ಱಲಿಗಳಿಂದ ಜನರನ್ನು ತಲುಪ್ಪುತ್ತೇವೆ ಅನ್ನುವುದು ತಪ್ಪು. ಈಗ ಜಗತ್ತಿನಲ್ಲಿ ಮಾಧ್ಯಮ ದೊಡ್ಡದಾಗಿ ಬೆಳೆದಿದೆ. ಮಾಧ್ಯಮದ ಮೂಲಕವೂ ಜನರನ್ನು ತಲುಪುವ ಯತ್ನ ಮಾಡುತ್ತಿದ್ದೇವೆ ಎಂದು ಉಪೇಂದ್ರ ಹೇಳಿದರು.

‘ರಾಜಕೀಯ ಅನ್ನುವುದು ಸಮಾಜ ಸೇವೆ’
ರಾಜಕೀಯ ಎಂಬುದು ಸಮಾಜ ಸೇವೆ. ದೇಶದಲ್ಲಿ ಎಲ್ಲರೂ ಸಮಾಜ ಸೇವೆ ಮಾಡುತ್ತಿದ್ದಾರೆ. ಇನ್‌ಡೈರೆಕ್ಟಾಗಿ ಟ್ಯಾಕ್ಸ್ ಕಟ್ಟುವ ಮೂಲಕ ಸೇವೆ ಮಾಡುತ್ತಿದ್ದಾರೆ. ಈಗಾಗಲೇ ರಾಜಕೀಯ ಪಕ್ಷಗಳು ಮ್ಯಾನಿಫೆಸ್ಟೋ ಬಿಡುಗಡೆ‌ ಮಾಡಿವೆ. ಆದರೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಯಾರದು? ಎಂದು ಪ್ರಶ್ನಿಸಿದ ಅವರು, ನಾವು ಮ್ಯಾನಿಫೆಸ್ಟೋ ಬಿಡುಗಡೆ ಮಾಡುತ್ತಿಲ್ಲ. ಜನರ ಸಮಸ್ಯೆಗಳನ್ನು ಪಟ್ಟಿ‌ ಮೂಲಕ ಕೇಳುತ್ತಿದ್ದೇವೆ. ಅದನ್ನು ಒಂದು ಲೆಟರ್‌ ಮೂಲಕ ಸಂಗ್ರಹ ಮಾಡುತ್ತಿದ್ದೇವೆ. ಈಗಾಗಲೇ ಹಲವು ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಶಿಕ್ಷಣ ಖಾಸಗೀಕರಣ, ನೀರಿನ ಸಮಸ್ಯೆ ಹಾಗೂ ಉದ್ಯೋಗ ಸೃಷ್ಟಿ ಕುರಿತು ಹೇಳಿಕೊಂಡಿದ್ದಾರೆ. ನಾವು ಸಾರ್ವಜನಿಕ ಸಭೆ ಸಮಾರಂಭ, ಱಲಿಗಳ ಮೂಲಕ ಪ್ರಚಾರ ಮಾಡುವುದಿಲ್ಲ ಎಂದು ಉಪೇಂದ್ರ ಹೇಳಿದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv