ಶಿಷ್ಯೆಯ ಅಶ್ಲೀಲ ವಿಡಿಯೋ ಅಪ್‌ಲೋಡ್‌: ನಿತ್ಯಾನಂದನ ವಿರುದ್ಧ ದೂರು

ಬೆಂಗಳೂರು: ರಾಸಲೀಲೆ ಪ್ರಕರಣದ ಆರೋಪಿ ಸ್ವಾಮಿ ನಿತ್ಯಾನಂದನಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ನಿತ್ಯಾನಂದನ ಹಳೆ ಶಿಷ್ಯೆಯೊಬ್ಬಳು ನಿತ್ಯಾನಂದನ ವಿರುದ್ಧ ಸೈಬರ್​ ಕ್ರೈಂಗೆ ದೂರು ದಾಖಲಿಸಿದ್ದಾರೆ. ನಿತ್ಯಾನಂದ ಮತ್ತು ಆತನ ಶಿಷ್ಯಂದಿರು ನನ್ನ ಅಶ್ಲೀಲ ವಿಡಿಯೋವನ್ನು ಯೂ-ಟ್ಯೂಬ್​ಗೆ ಅಪ್‌ಲೋಡ್​ ಮಾಡಿದ್ದಾರೆ ಅಂತಾ ಆರೋಪಿಸಿ ಸೈಬರ್​ ಕ್ರೈಂಗೆ ದೂರು ಕೊಟ್ಟಿದ್ದಾರೆ.
ಕರ್ಮಕಾಂಡ ಅನ್ನೋ ಯೂಸರ್ ಐಡಿ ಮೂಲಕ ಪೋರ್ನ್ ಸ್ಟಾರ್ ಎಂದು ಹೆಸರು ಕೊಟ್ಟು ಯೂ-ಟ್ಯೂಬ್‌ಗೆ ವಿಡಿಯೋ ಅಪ್ಲೋಡ್ ಮಾಡಿ ನನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ ಅಂತಾ ಯುವತಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಐಪಿಸಿ ಸೆಕ್ಷನ್ 354 ಸಿ, 509ರ ಅಡಿಯಲ್ಲಿ ಸೈಬರ್ ಕ್ರೈಂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧ ನಿತ್ಯಾನಂದ ಸ್ವಾಮಿಗೆ ನೋಟಿಸ್ ನೀಡಲು ಸಿಐಡಿ ತಂಡ ಸಿದ್ಧತೆ ನಡೆಸಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv