ಪರಿಷತ್​ನಲ್ಲಿ ಬಿಜೆಪಿ-ಕಾಂಗ್ರೆಸ್​ ಜಟಾಪಟಿ

ಬೆಂಗಳೂರು: ಪೌರ ಕಾರ್ಮಿಕರಿಗೆ ವೇತನ ಸಿಗದಿರೋದಕ್ಕೆ ಬಿಜೆಪಿ ಪಕ್ಷವೇ ನೇರ ಕಾರಣ ಎಂದು ಪರಿಷತ್​ ಸದಸ್ಯ ಜಿ.ಕೆ.ವೆಂಕಟೇಶ್ ಆರೋಪಿಸಿದರು. ವೆಂಕಟೇಶ್ ಆರೋಪಕ್ಕೆ ಬಿಜೆಪಿ ಸದಸ್ಯರು ಕೆಂಡಾಮಂಡಲವಾದರು. ಆರೋಪ ಖಂಡಿಸಿ ಪರಿಷತ್​ ಕೌನ್ಸಿಲ್ ಬಾವಿಗಿಳಿದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ವೆಂಕಟೇಶ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಜಿ.ಕೆ.ವೆಂಕಟೇಶ್,​ ಪೌರ ಕಾರ್ಮಿಕ ಸುಬ್ರಹ್ಮಣ್ಯ ಸಾವಿಗೆ ಬಿಬಿಎಂಪಿ ಮೇಯರ್ ಕಾರಣ ಅಂತಾ ಬಿಜೆಪಿ ಹೇಳಿತ್ತು, ಅದಕ್ಕೆ ನಾನು ತಿರುಗೇಟು ನೀಡಿದೆ ಅಂತಾ ಸಮರ್ಥನೆ ಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆಯಿತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv