2022ರ ಫುಟ್​​ಬಾಲ್ ವಿಶ್ವಕಪ್​ಗೆ ಕಪಿಲ್​ದೇವ್, ಧೋನಿಗೆ ಆಹ್ವಾನ..!

ಕತಾರ್​ನಲ್ಲಿ ನಡೆಯಲಿರುವ 2022ರ ಫುಟ್​​ಬಾಲ್ ವಿಶ್ವಕಪ್​ಗೆ ಭಾರತದ 1983 ಹಾಗು 2011ರ ವಿಶ್ವಕಪ್ ವಿಜೇತ ತಂಡಗಳನ್ನ ಆಹ್ವಾನಿಸಲಾಗಿದೆ. ಟೂರ್ನಿ ಸಿಇಒ ನಾಸೀರ್ ಅಲ್ ಖಾತರ್ ಈ ಎರಡು ತಂಡಗಳಿಗೆ ಆಹ್ವಾನ ನೀಡಿದ್ದಾರೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಫುಟ್​​ಬಾಲ್ ಮಹಾಸಂಗ್ರಾಮಕ್ಕೆ ಮುಂದಿನ ಬಾರಿ ಅರಬ್​ ರಾಷ್ಟ್ರ ಕತಾರ್ ಆತಿಥ್ಯ ವಹಿಸಲಿದೆ. ಕಳೆದ ವರ್ಷ ರಷ್ಯಾ ಫುಟ್​​ಬಾಲ್ ಹಬ್ಬಕ್ಕೆ ಸಾಕ್ಷಿಯಾಗಿತ್ತು. ಟೂರ್ನಿಯಲ್ಲಿ ಫ್ರಾನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಭಾರತದಲ್ಲಿ ಕ್ರಿಕೆಟ್‌ನ ಜನಪ್ರಿಯತೆ ಬಗ್ಗೆ ನನಗೆ ಗೊತ್ತಿರಲಿಲ್ಲ. ಹೀಗಾಗಿ 1983 ಹಾಗೂ 2011ರ ವಿಶ್ವಕಪ್‌ ವಿಜೇತ ತಂಡದ ಸದಸ್ಯರನ್ನ ಕತಾರ್‌ಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಿದ್ದೇನೆ. ಭಾರತೀಯ ಕ್ರಿಕೆಟಿಗರ ಉಪಸ್ಥಿತಿಯಿಂದ ಟೂರ್ನಿಗೆ ಮತ್ತಷ್ಟು ಮೆರಗು ಬರಲಿದೆ. ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಕಪಿಲ್‌ದೇವ್‌ ಹಾಗೂ ಧೋನಿ ಅವರನ್ನು ವಿಶೇಷವಾಗಿ ಆಮಂತ್ರಿಸಲಾಗಿದೆ ಎಂದು ಅಲ್ ಖಾತರ್ ತಿಳಿಸಿದ್ದಾರೆ.