ಕಾಲ್ಚೆಂಡಿನ ಕಾಳಗಕ್ಕೆ ಕೌಂಟ್​ಡೌನ್: ರಷ್ಯಾದಲ್ಲಿ ಇಂದಿನಿಂದ ವಿಶ್ವ ಸಮರ..!

ಮಾಸ್ಕೋ: ರೋಮಾಂಚನ.. ಕೌತುಕ.. ಹಾರಾಟ.. ಸಂಭ್ರಮ.. ಉನ್ಮಾದ.. ಹತಾಶೆ.. ದುಃಖ..ಆಕ್ರೋಶಗಳ ರಸದೌತಣ ನೀಡುವ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಹಬ್ಬಕ್ಕೆ ಕ್ಷಣಗಣನೆ ಸ್ಟಾರ್ಟ್​ ಆಗಿದೆ. ಕ್ರೀಡಾ ಜಗತ್ತಿನ ಬಹು ದೊಡ್ಡ ಹಾಗೂ ಅತ್ಯಂತ ಶ್ರೀಮಂತವೆನಿಸಿದ ಕಾಲ್ಚೆಂಡಿನ ರೋಚಕ ಕಾಳಗಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ಸಿಗಲಿದೆ. ಹೀಗಾಗಿ ರೋಚಕ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುವ ಕೋಟ್ಯಂತರ ಅಭಿಮಾನಿಗಳ ಹೃದಯ ಮಿಡಿತ ಸಹಜವಾಗಿಯೇ ಹೆಚ್ಚಾಗಿದೆ.

ಇದೇ ಮೊದಲ ಬಾರಿಗೆ ವಿಶ್ವಕಪ್‌ ಆತಿಥ್ಯ ವಹಿಸುತ್ತಿರುವ ರಷ್ಯಾ, ಅತ್ಯಂತ ಸ್ಮರಣೀಯ ಹಾಗೂ ಯಶಸ್ವಿಯಾಗಿ ನಡೆಸಲು ಪಣ ತೊಟ್ಟಿದೆ. ಈ ಬಾರಿಯ ಫಿಫಾ ಫುಟ್ಬಾಲ್ ವಿಶ್ವಕಪ್​ನಲ್ಲಿ ವಿಶ್ವದ 32 ತಂಡಗಳು ಭಾಗವಹಿಸಲಿವೆ. 32 ದಿನಗಳ ಕಾಲ ನಡೆಯುವ ಈ ಹಬ್ಬವನ್ನು 12 ಕ್ರೀಡಾಂಗಣಗಳಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಉದ್ಘಾಟನಾ ಪಂದ್ಯದಲ್ಲಿ ರಷ್ಯಾ ಮತ್ತು ಸೌದಿ ಅರೇಬಿಯಾ ತಂಡಗಳು ಮುಖಾಮುಖಿಯಾಗಲಿವೆ. ನೆಚ್ಚಿನ ತಂಡಗಳಾದ ಬ್ರೆಜಿಲ್‌, ಜರ್ಮನಿ, ಆರ್ಜೆಂಟೀನಾ, ಸ್ಪೇನ್‌ಗಳ ನೈಜ ಸಾಮರ್ಥ್ಯ ಅನಾವರಣಗೊಳ್ಳಲಿದೆ.

ಇನ್ನು, ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಪಂದ್ಯದಲ್ಲಿ ಸೋಲು-ಗೆಲುವು ಲೆಕ್ಕಾಚಾರ ಹಾಕಲು ಈ ಬಾರಿ ಅಚಿಲೆಸ್ ಬೆಕ್ಕು ರೆಡಿಯಾಗಿದೆ. 2010ರಲ್ಲಿ ಪೌಲ್ ಅಕ್ಟೋಪಸ್ ಫಿಫಾ ಪಂದ್ಯದ ಭವಿಷ್ಯ ಹೇಳೋ ಮೂಲಕ ಭಾರಿ ಜನಪ್ರಿಯವಾಗಿತ್ತು. ಆದರೆ ಈ ಬಾರಿ ಅಚಿಲೆ ಬೆಕ್ಕು ಸೋಲು-ಗೆಲುವಿನ ಭವಿಷ್ಯ ನುಡಯಲಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv