ಫಿಫಾ ವರ್ಲ್ಡ್​ಕಪ್​ ಗೆದ್ದವರಿಗೆ ಸಿಗೋ ಹಣ ಎಷ್ಟು..?

ಈ ಜಗತ್ತಿನಲ್ಲಿ ನಡೆಯೋ ಕ್ರೀಡಾಕೂಟಗಳಲ್ಲಿ ಒಲಿಂಪಿಕ್​ ಬಿಟ್ರೆ, ಅತ್ಯಂತ ದೊಡ್ಡ ಟೂರ್ನಿ ಫಿಫಾ ವರ್ಲ್ಡ್​ ಕಪ್​. ರಷ್ಯಾದಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವ​ಕಪ್​ ಟೂರ್ನಿಯಲ್ಲಿ, ಫಿಫಾ ಈ ಹಿಂದಿನ ಎಲ್ಲ ಟೂರ್ನಿಗಳಿಗಿಂತೆ ಹೆಚ್ಚು ಹಣ ಗಳಿಸುತ್ತಿದ್ದು, ಸರಿಸುಮಾರು 5000 ಕೋಟಿಗೂ ಹೆಚ್ಚು ಮೊತ್ತದ ವ್ಯವಹಾರ ನಡೆಯಲಿದೆ. ಇನ್ನೂ ಬ್ರೆಜಿಲ್​ನಲ್ಲಿ ನಡೆದ 2014ರ ವಿಶ್ವಕಪ್​ ಟೂರ್ನಿಗೆ ಹೋಲಿಸಿದ್ರೆ, ಈ ಬಾರಿಯ ಫಿಫಾ ವರ್ಲ್ಡ್​​ಕಪ್​ಗಳಿಕೆಯಲ್ಲಿ ಶೇ.40ರಷ್ಟು ಹೆಚ್ಚಾಗಿದೆ.

ಯಾರಿಗೆ ಎಷ್ಟು…?
ಫಿಫಾ ವರ್ಲ್ಡ್​ಕಪ್​ ಲೀಗ್​ ಪಂದ್ಯಗಳನ್ನಾಡುವ ಪ್ರತಿಯೊಂದು ತಂಡಗಳು 54 ಕೋಟಿಗೂ ಹೆಚ್ಚು ಹಣ ಗಳಿಸಿದ್ರೆ, ರೌಂಡ್​ 16 ಗ್ರೂಪ್​ಗೆ ಎಂಟ್ರಿ ನೀಡೋ ಪ್ರತಿಯೊಂದು ತಂಡ 81 ಕೋಟಿ ಮೊತ್ತವನ್ನ ಗಳಿಸುತ್ತೆ. ಇನ್ನು ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಕ್ವಾಟರ್​ಫೈನಲ್​​ಗೆ ಎಂಟ್ರಿ ನೀಡೋ ಪ್ರತಿಯೊಂದು ತಂಡ, 108 ಕೋಟಿ ಮೊತ್ತದ ಬಹುಮಾನ ಗಳಿಸಿಕೊಳ್ಳುತ್ತೆ. ಪ್ರತಿಷ್ಠಿತ ಟೂರ್ನಿಯಲ್ಲಿ 4ನೇ ಸ್ಥಾನ ಪಡೆಯುವ ತಂಡ 148 ಕೋಟಿ ಮೊತ್ತವನ್ನ ತನ್ನ ಜೇಬಿಗೆ ಇಳಿಸಿಕೊಂಡ್ರೆ, 3ನೇ ಸ್ಥಾನ ಪಡೆಯುವ ತಂಡ 162 ಕೋಟಿ ಮೊತ್ತವನ್ನ ಪಡೆದುಕೊಳ್ಳುತ್ತೆ.

ಫಿಫಾ ವರ್ಲ್ಡ್​ಕಪ್ ವಿನ್ನರ್​ ಗಳಿಸೋ ಮೊತ್ತ ಎಷ್ಟು..?
ವಿಶ್ವದಲ್ಲೇ ಎರಡನೇ ದೊಡ್ಡ ಕ್ರೀಡಾಕೂಟವಾದ ಫಿಫಾ ವರ್ಲ್ಡ್​ಕಪ್​ನಲ್ಲಿ ಚಾಂಪಿಯನ್ ಆಗೋ ತಂಡ, ಕೋಟಿ ಕೋಟಿ ಬಹುಮಾನದ ಮೊತ್ತವನ್ನ ತನ್ನದಾಗಿಸಿಕೊಳ್ಳುತ್ತೆ.​ ಫುಟ್ಬಾಲ್​ ವಿಶ್ವಕಪ್​ ಗೆಲ್ಲುವ ತಂಡ ಬರೋಬ್ಬರಿ 256 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನ ಗಳಿಸಿದ್ರೆ, ರನ್ನರ್​ ಅಪ್ ಆಗೋ​ ತಂಡ 189 ಕೋಟಿ ಮೊತ್ತವನ್ನ ತನ್ನದಾಗಿಸಿಕೊಳ್ಳುತ್ತೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv