ಫಿಫಾ ವಿಶ್ವಕಪ್‌ ಫುಟ್‌ಬಾಲ್‌: ಫೈನಲ್‌ಗೆ ಎಂಟ್ರಿ ಕೊಟ್ಟ ಫ್ರಾನ್ಸ್‌

ಸೇಂಟ್‌ ಪೀಟರ್ಸ್‌ಬರ್ಗ್‌: ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಮೊದಲ ಸೆಮಿ ಫೈನಲ್‌ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಂ ವಿರುದ್ಧ ಫ್ರಾನ್ಸ್‌ 1-0 ಗೋಲ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಫ್ರಾನ್ಸ್‌ ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದೆ. ಪೀಟರ್ಸ್‌ಬರ್ಗ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 51ನೇ ನಿಮಿಷದಲ್ಲಿ ಸ್ಯಾಮುಯಲ್‌ ಗಳಿಸಿದ ಗೋಲ್‌ ನೆರವಿನಿಂದ ಫ್ರಾನ್ಸ್‌ ಗೆಲುವು ಸಾಧಿಸಿತು. ಕಳೆದ 2 ದಶಕಗಳಲ್ಲಿ ಮೂರನೇ ಬಾರಿ ಫೈನಲ್‌ಗೆ ಪ್ರವೇಶ ಪಡೆದ ಹೆಗ್ಗಳಿಕೆಗೂ ಫ್ರಾನ್ಸ್‌ ಪಾತ್ರವಾಯಿತು. 1998 ಮತ್ತು 2006ರಲ್ಲಿ ಫ್ರಾನ್ಸ್​​ ಫೈನಲ್‌ ಪ್ರವೇಶಿಸಿತ್ತು. 1998ರಲ್ಲಿ ಫ್ರಾನ್ಸ್‌ ವಿಶ್ವಕಪ್‌ ಫುಟ್‌ಬಾಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.