ನನ್ನ ಹೆಂಡತಿ ವರ್ಷಕ್ಕೊಮ್ಮೆ ಸ್ನಾನ ಮಾಡ್ತಾಳೆ, ನನಗೆ ಡಿವೋರ್ಸ್​ ಕೊಡಿ..!

ಅವರಿಬ್ಬರೂ ಮದ್ವೆಯಾಗಿ ಹೊಸದರಲ್ಲಿ ಚನ್ನಾಗೇ ಇದ್ರು. ಆದ್ರೆ ಅದ್ಯಾಕೋ ಅವಳಿಗೆ ಇಂಥ ವಿಚಿತ್ರ ದುರಭ್ಯಾಸ ಮೈಗಂಟಿಕೊಂಡಿತ್ತು. ಇದನ್ನು ದುರಭ್ಯಾಸ, ಅನ್ನೋದೋ ಮಾನಸಿಕ ಕಾಯಿಲೆ ಅನ್ನೋದೋ, ಚಟ ಅನ್ನೋದೋ ನಮಗೂ ಗೊತ್ತಾಗ್ತಿಲ್ಲ. ಒಟ್ಟಿನಲ್ಲಿ ಅವಳ ವರ್ತನೆಯಿಂದ ಗಂಡ ಮಾನಸಿಕವಾಗಿ ದೈಹಿಕವಾಗಿ ಕಿರಿಕಿರಿ ಅನುಭವಿಸಿ ಕುಗ್ಗಿಹೋಗಿದ್ದ. ಇದ್ರಿಂದ ಆಕೆಗೆ ಡಿವೊರ್ಸ್​ ನೀಡೋಕು ಮುಂದಾಗಿದ್ದಾನೆ. ಅವಳಿಗಿದ್ದ ಅಂಥಾ ವಿಚಿತ್ರ ಕಾಯಿಲೆಯಾದ್ರೂ ಏನೂ… ಅಂತೀರಾ…?
ಅವಳ ಹೆಸರು ‘ಲಿನ್​’ ಅವಳಿಗಿದ್ದ ವಿಚಿತ್ರ ಮಾನಸಿಕ ಕಾಯಿಲೆ ಏನಂದ್ರೆ…..ಆಕೆ ಸ್ನಾನ ಮಾಡ್ತಾಯಿದ್ದದ್ದು ವರ್ಷಕ್ಕೆ ಒಮ್ಮೆ ಮಾತ್ರ, ವಿಚಿತ್ರ ಆದ್ರೂ ಇದು ಸತ್ಯ. ಅಸಲಿಗೆ ಲಿನ್​ ಮೇಲೆ ಈ ಆರೋಪ ಮಾಡ್ತಿರೋದು ಆಕೆಯ ಪತಿಯೇ. ಇನ್ನು ವಿಚಿತ್ರ ಅಂದ್ರೆ ಆಕೆ ಬ್ರಶ್​ ಮಾಡೊದು, ತಲೆ ಕೂದಲು ತೊಳೆಯೋದು ಕೂಡಾ ಕೆಲವು ವಿಶೇಷ ದಿನಗಳಲ್ಲಿ ಮಾತ್ರ, ಇನ್ನೂ ಕಳೆದ 10 ವರ್ಷಗಳ ಹಿಂದೆ ಒಮ್ಮೆ ಸಂತಾನ ದೃಷ್ಟಿಯಿಂದ ದೈಹಿಕ ಸಂಪರ್ಕ ನಡೆಸಿದ್ದು ಬಿಟ್ಟರೆ ಮತ್ತೆ ಅವಳೊಟ್ಟಿಗೆ ಸೇರಿಲ್ಲ ಎಂಬುದು ಪತಿರಾಯನ ಅಳಲು, ಇದ್ರಿಂದ ಬೇಸತ್ತ ಆತ ಅವಳಿಂದ ನನಗೆ ವಿಚ್ಛೇದನ ಕೊಡಿ ಅಂತಾ ನ್ಯಾಯಾಲಯದ ಮೆಟ್ಟಿಲೇರಿದ್ದ. ಅವನ ಅರ್ಜಿಯನ್ನು ಪರಿಶೀಲಿಸಿ ನ್ಯಾಯಾಲಯ ವಿಚ್ಛೇದನ ನೀಡಲು ಒಪ್ಪಿಗೆ ಸೂಚಿಸಿದೆಯಂತೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ:contact@firstnews.tv