ಫೆ. 6, ‘ಪರಿಸರ ಉತ್ಸವ’ ಹಾಗೂ ಪರಿಸರ ಮಿತ್ರ ಸಮಾರಂಭ

ದಾವಣಗೆರೆ: ಫೆಬ್ರವರಿ 6ರಂದು ಪರಿಸರ ಉತ್ಸವ ಹಾಗೂ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭವನ್ನ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ಎಸ್ ದೇವರಮನೆ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಕುವೆಂಪು ಕನ್ನಡ ಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಪರಿಸರ ಸಂರಕ್ಷಣ ವೇದಿಕೆ ಸೇರಿದಂತೆ ವಿವಿಧ ‌ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅಂದು ವಿವಿಧ ಕಲಾ ತಂಡಗಳು, ಶಾಲಾ ಮಕ್ಕಳ ಜಾಗೃತಿ ಜಾಥಾ ಮೂಲಕ ಸಾರೋಟಿನಲ್ಲಿ ಪದ್ಮಶ್ರೀ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ಹಾಗೂ ಪರಿಸರ ಪ್ರೇಮಿ ಸಾಲುಮರದ ವೀರಾಚಾರಿ ಅವರನ್ನು ಮೆರವಣಿಗೆ ಮೂಲಕ ಕುವೆಂಪು ಕನ್ನಡ ಭವನಕ್ಕೆ ಕರೆತರಲಾಗುತ್ತದೆ. ಬೆಳಿಗ್ಗೆ 11ಕ್ಕೆ ಕುವೆಂಪು ಕನ್ನಡ ಭವನದಲ್ಲಿ ಸಭಾ ಕಾರ್ಯಕ್ರಮವನ್ನು ಅರಣ್ಯ ಖಾತೆ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸುವರು, ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮಿಜಿ ಸಾನಿಧ್ಯ ವಹಿಸುವರು. ಇನ್ನು, ಪರಿಸರ ಸಂರಕ್ಷಣ ವೇದಿಕೆಯನ್ನ ತಾವೇ ಅಧ್ಯಕ್ಷತೆ ವಹಿಸುವುದಾಗಿ ಹೇಳಿದ್ದಾರೆ.