ಸಾಲಬಾಧೆಗೆ ನೊಂದು ರೈತ ಆತ್ಮಹತ್ಯೆ

ಯಾದಗಿರಿ: ಸಾಲಬಾಧೆ ತಾಳಲಾರದೆ ರೈತ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸುರಪುರ ತಾಲೂಕಿನ ಬೈರಿಮಡ್ಡಿ ಗ್ರಾಮದಲ್ಲಿ ನಡೆದಿದೆ. ಶರಣಬಸಪ್ಪ ತಳವಾರ (35) ಮೃತ ರೈತ. ಎರಡು ಎಕರೆ ಜಮೀನಿನಲ್ಲಿ ಭತ್ತ ನಾಟಿಮಾಡಿದ್ದ ಶರಣಪ್ಪ, ಮಳೆಯಿಂದ ನಾಟಿ ಮಾಡಿದ್ದ ಭತ್ತದ ಬೆಳೆ ಕೈಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೇ ಹೆದರಿದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತ ಬೆಳೆಗೆ ಹಲವರಲ್ಲಿ ಕೈಸಾಲ ಮತ್ತು ಬ್ಯಾಂಕ್​ನಲ್ಲಿ  3 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು ಎನ್ನಲಾಗಿದೆ.  ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv