ಏ.30ರ ಬಳಿಕ ವಿಂಡೋಸ್​ ಫೋನ್​ನಲ್ಲಿ ಎಫ್​ಬಿ, ಇನ್ಸ್​ಟಾಗ್ರಾಂ ವರ್ಕ್​ ಆಗಲ್ಲ..!

ಏಪ್ರಿಲ್​ 30ರಿಂದ ವಿಂಡೋಸ್​ ಫೋನ್​ನಲ್ಲಿ ಫೇಸ್​ಬುಕ್ ಮತ್ತು ಇನ್ಸ್​ಟಾಗ್ರಾಂ ಌಪ್​ ಬಳಸಲು ಸಾಧ್ಯವಾಗುವುದಿಲ್ಲ. ವಿಂಡೋಸ್​ ಫೋನ್​ಗೆ ಸಪೋರ್ಟ್​ ಮಾಡುವುದನ್ನು ನಿಲ್ಲಿಸುವುದಾಗಿ ಫೇಸ್​ಬುಕ್ ದೃಢಪಡಿಸಿದೆ. ಇನ್ಮುಂದೆ ಎಫ್​ಬಿ, ಇನ್ಸ್​ಟಾಗ್ರಾಂ ಬಳಸಬೇಕಂದ್ರೆ ನೀವು ಆದಷ್ಟು ಬೇಗ ಫೋನ್​ ಬದಲಾಯಿಸುವುದು ಒಳ್ಳೆಯದು. ಆದ್ರೆ ಮೊಬೈಲ್ ಬ್ರೌಸರ್​​ಗಳ ಮೂಲಕ ಈ ಌಪ್​ಗಳನ್ನು ಬಳಸಬಹುದಂತೆ.

2019ರ ಡಿಸೆಂಬರ್​ ನಂತರ ವಿಂಡೋಸ್​ 10 ಫೋನ್​ಗಳಿಗೆ ಯಾವುದೇ ಸೆಕ್ಯುರಿಟಿ ಅಪ್ಡೇಟ್​ ಮಾಡದಿರಲು ನಿರ್ಧರಿಸಿದ್ದಾಗಿ ಇದೇ ಜನರಿಯಲ್ಲಿ ಮೈಕ್ರೋಸಾಫ್ಟ್​ ಸಂಸ್ಥೆ ಹೇಳಿತ್ತು. ಹಾಗಾಗಿ ಌಂಡ್ರಾಯ್ಡ್ ಅಥವಾ ಐಒಎಸ್​ ಡಿವೈಸ್​ ಬಳಸುವಂತೆ ಗ್ರಾಹಕರಿಗೆ ಮೈಕ್ರೋಸಾಫ್ಟ್​ ತನ್ನ ಸಪೋರ್ಟ್​ ಪೇಜ್​ನಲ್ಲಿ ಬರೆದುಕೊಂಡಿತ್ತು.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv