ನಾವೇ ಬೇರೆ, ನಮ್ ಸ್ಟೈಲೇ ಬೇರೆ, ನಮ್ಮಪ್ಪ ಇನ್ನೂ ಕ್ರೇಜಿ..!

ತರ್ಲೆ ಮಕ್ಕಳು ಕೊಡುವ ಕಿತಾಪತಿ ಅಷ್ಟಿಷ್ಟಲ್ಲ. ಅವ್ರನ್ನ ಸಂಬಾಳಿಸೋದೇ ದೊಡ್ಡ ಕೆಲಸ.  ಹೀಗೆ ಪುಟಾಣಿಯೊಂದು ಅಪ್ಪನ ಹೆಗಲ ಮೇಲೆ ಕುಳಿತ ಫೋಟೋ ಒಂದು ಎಲ್ಲರನ್ನ ನಿಬ್ಬೆರಗಾಗಿಸಿದೆ. ಆದ್ರೆ ಇದು ಮಗುವಿನ ಕಿತಾಪತಿ ಅಲ್ಲ. ಬದಲಾಗಿ ಕ್ರೇಜಿ ಅಪ್ಪನ ಸೂಪರ್​ ಪ್ಲಾನ್​​ನಿಂದಾಗಿ. ಅದೇನಂದ್ರೆ ತಂದೆಯೊಬ್ಬರು ತನ್ನ ಮಗಳನ್ನ ಹೆಗಲ ಮೇಲೆ ಕೂರಿಸಿಕೊಂಡಿದ್ದಾರೆ. ಮಗು ಕಿತಾಪತಿ ಮಾಡ್ಬಾರದು ಅಂತಾ ತನ್ನ ತಲೆಯ ಕೂದಲಿನಿಂದ ಬಲವಾಗಿ ಕಟ್ಟಿದ್ದಾರೆ. ಮಗುವಿನ ಒಂದು ಕಾಲನ್ನ ಹಿಡಿದುಕೊಂಡು ಹೋಗಿದ್ದಾರೆ. ವಿಚಿತ್ರ ರೀತಿಯಲ್ಲಿ ತನ್ನ ಮಗಳನ್ನ ತಲೆ ಕೂದಲಿನಿಂದ ಕಟ್ಟಿಕೊಂಡು ಓಡಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಹಲ್​ಚಲ್ ಎಬ್ಬಿಸಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv