ಮಗಳಿಗೆ ಅಪ್ಪನೇ ತಯಾರಿಸಿಕೊಟ್ಟ ಪ್ರೋಗ್ರೆಸ್ ಕಾರ್ಡ್

ತಾಸ್ಮೇನಿಯಾ: ಎಲ್ಲಾ ವಿಚಾರಗಳಲ್ಲೂ ನಮ್ಮ ಮಕ್ಕಳೇ ಮುಂದಿರಬೇಕು ಅನ್ನೋದು ಎಲ್ಲಾ ಪೋಷಕರ ಆಸೆ. ಅದರಲ್ಲೂ ಓದೋ ವಿಚಾರದಲ್ಲಂತೂ ತಮ್ಮ ಮಕ್ಕಳು ಎ ಗ್ರೇಡ್ ಪಡಿಬೇಕು ಅನ್ನೋದು ಅಪ್ಪಂದಿರ ಆಸೆಯಾಗಿರುತ್ತೆ. ಅಕಸ್ಮಾತ್ ಮಕ್ಕಳೇನಾದ್ರೂ ಬಿ ಅಥವಾ ಸಿ ಗ್ರೇಡ್ ತಗೋಂಡ್ರು ಅಂದ್ರೆ ಮಕ್ಕಳನ್ನ ಅಪ್ಪಂದಿರು ತರಾಟೆಗೆ ತಗೆದುಕೊಳ್ತಾರೆ. ಆದರೆ ಎಲ್ಲಾ ವಿಷಯಗಳಲ್ಲೂ ಡಿ ಗ್ರೇಡ್ ತಗೆದುಕೊಂಡ ಮಗಳಿಗಾಗಿ ತಾನೇ ಹೊಸ ಪ್ರೋಗ್ರೆಸ್ ಕಾರ್ಡ್ ತಯಾರಿಸಿಕೊಟ್ಟ ಅಪ್ಪನ ಕಥೆ ಇಲ್ಲಿದೆ ನೋಡಿ…
ಶೇನ್ ಜಾಕ್ಸನ್​ನ ಎಂಬವರ ಮಗಳು ಸೋಫಿ ಆಟಿಸ್ ಸ್ಪೆಕ್ಟ್ರಮ್ ಡಿಸಾರ್ಡರ್ ಖಾಯಿಲೆಗೆ ತುತ್ತಾಗಿರ್ತಾಳೆ. ಇದರಿಂದ ಓದುವ ಕಡೆ ಗಮನ ಹರಿಸಲಾಗದೇ ಎಲ್ಲಾ ವಿಷಯಗಳಲ್ಲೂ ಡಿಗ್ರೇಡ್ ಪಡೆದುಕೊಂಡಿರುತ್ತಾಳೆ. ಕಡಿಮೆ ಅಂಕಗಳಿಗೆ ಸೋಫಿ ಅಳಲಾರಂಭಿಸಿದಾಗ ಶೇನ್ ಜಾಕ್ಸನ್​ ಆಕೆಗಾಗಿಯೇ ಒಂದು ಪ್ರೋಗ್ರೆಸ್ ಕಾರ್ಡ್ ತಯಾರಿಸಿ ಕೋಡ್ತಾನೆ. ಮಗಳ ಗುಣಗಳನ್ನೆಲ್ಲಾ ಆ ಕಾರ್ಡ್​ನಲ್ಲಿ ವರ್ಣಿಸಿ ಎ ಮತ್ತು ಎ+ ಗ್ರೇಡ್​ಗಳನ್ನು ಕೊಟ್ಟಿದ್ದಾನೆ. ಅಲ್ಲದೇ ಪ್ರೋಗ್ರೆಸ್ ಕಾರ್ಡ್​ನ್ನು ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾನೆ. ಈತನ ಪೋಸ್ಟ್​ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಮಾರು 62 ಸಾವಿರ ಜನ ಶೇನ್ ಜಾಕ್ಸನ್ ಪೋಸ್ಟ್​ನ್ನು ಲೈಕ್ ಮಾಡಿದ್ದಾರೆ. ಅಲ್ಲದೇ ಸುಮಾರು 10ಸಾವಿರಕ್ಕೂ ಅಧಿಕ ಜನ ರಿಟ್ವೀಟ್ ಮಾಡಿದ್ದಾರೆ.

ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಎಂದರೇನು
ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ನರವೈಜ್ಞಾನಿಕ ಸಮಸ್ಯೆಯಾಗಿದ್ದು, ಸಮಪರ್ಕ ಸಂವಹನ ಹಾಗೂ ದೈಹಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಬಾಲ್ಯದಲ್ಲೇ ಕಾಣಿಸಿಕೊಳ್ಳುವ ಈ ಕಾಯಿಲೆ ಸಾವಿನವರೆಗೂ ಕಾಡುವ ಸಾಧ್ಯತೆಗಳಿರುತ್ತದೆ.