ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹ, ರೈತರ ಪ್ರತಿಭಟನೆ

ರಾಮನಗರ: ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಮಹಾದಾಯಿ ವಿಚಾರ ಪ್ರಸ್ತಾಪಿಸಬೇಕು ಎಂದು ಆಗ್ರಹಿಸಿ ರಾಮನಗರದ ಐಜೂರು ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಪ್ರಧಾನಿ ಮೋದಿ ರೈತರ ಆತ್ಮಹತ್ಯೆ, ಸಾಲಮನ್ನಾ ವಿಚಾರವಾಗಿ ಕ್ರಮಕೈಗೊಳ್ಳ ಬೇಕೆಂದು ಹೋರಾಟ ನಿರತರು ಆಗ್ರಹಿಸಿದರು. ನಂತರ ರೈತರು ಬೆಂಗಳೂರಿಗೆ ತೆರಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಐಜೂರು ಪೊಲೀಸರು ಹೋರಾಟಗಾರನ್ನು ವಶಕ್ಕೆ ಪಡೆದರು.

Leave a Reply

Your email address will not be published. Required fields are marked *