ರಸ್ತೆಗೆ ಹಾಲು ಸುರಿದು ಡೈರಿಯ ವಿರುದ್ಧ ರೈತರ ಪ್ರತಿಭಟನೆ..!

ಬೆಳಗಾವಿ: ಮಹಾರಾಷ್ಟ್ರದ ಗೋಕುಲ್ ಡೈರಿಯಿಂದ ಹಾಲು ಖರೀದಿಸಲು ನಿರಾಕರಿಸಿದ ಹಿನ್ನಲೆಯಲ್ಲಿ ರಸ್ತೆಗೆ ಹಾಲು ಸುರಿದು ರೈತರು ಪ್ರತಿಭಟನೆ ನಡೆಸಿದ್ದಾರೆ. ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದ ರೈತರು ಹಾಲು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು.

ಮಹಾರಾಷ್ಟ್ರದ ಗೋಕುಲ್ ಡೈರಿಯವರು ತಾಲೂಕಿನಲ್ಲಿನ ಗ್ರಾಮಗಳ ಮನೆ ಮನೆಗೆ ಬಂದು ಹಾಲು ಖರೀದಿಸುತ್ತಿದ್ರು. ಆದ್ರೆ ಡೈರಿಯವರು ಏಕಾಏಕಿ ಕರ್ನಾಟಕದ ಹಾಲು ಖರೀದಿಸಲು ನಿರಾಕರಿಸಿದ ಹಿನ್ನಲೆ ಕಂಗೆಟ್ಟ ರೈತರು ರಸ್ತಗೆ ಹಾಲು ಸುರಿದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ದಿನ ನಿತ್ಯ ಹತ್ತು ಸಾವಿರಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದ ರೈತರು ಡೈರಿಯವರ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv