ಸಿಎಂ ಕುಮಾರಸ್ವಾಮಿ ಕಟೌಟ್​ಗೆ ಕಬ್ಬಿನ ಹಾಲಿನಿಂದ ಅಭಿಷೇಕ

ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾರಸವಾಡಿ ಗ್ರಾಮದ ರೈತರು ಸಿಎಂ ಕುಮಾರಸ್ವಾಮಿ ಕಟೌಟ್​​ಗೆ ಕಬ್ಬಿನ ಹಾಲಿನಿಂದ ಅಭಿಷೇಕ ಮಾಡಿದ್ದಾರೆ. ಭತ್ತಕ್ಕೆ ಬೆಂಬಲ ನೀಡಿ, ಸಮಾರು 17.20 ಕೋಟಿಯಷ್ಟು ಕಬ್ಬಿನ ಬಾಕಿ ಹಣ ಬಿಡುಗಡೆ ಮಾಡಿದ್ದರಿಂದ ಕಾರಸವಾಡಿ, ಮಂಗಲ, ಹೆಮ್ಮಿಗೆ, ಸೂನಗಹಳ್ಳಿ, ಹನಿಯಂಬಾಡಿ ಸೇರಿದಂತೆ ಅಕಪಕ್ಕದ ಗ್ರಾಮದ ರೈತರಲ್ಲಿ ಹರ್ಷಗೊಂಡು ಸಿಎಂ ಕುಮಾರಸ್ವಾಮಿ ಕಟೌಟ್​​ಗೆ ಕಬ್ಬಿನ ಹಾಲಿನ ಅಭಿಷೇಕ ಮಾಡಿದ್ದಾರೆ. ಈ ವೇಳೆ ರೈತರು ಸಿಎಂ ಕುಮಾರಸ್ವಾಮಿ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಘೋಷಣೆ ಕೂಗಿದರು. ಇನ್ನೊಂದೆಡೆ ಮೇಳಾಪುರ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಎತ್ತಿನಗಾಡಿಯಲ್ಲಿ ರೋಡ್ ಶೋ ಆರಂಭಿಸಿದಾಗ ಗ್ರಾಮಸ್ಥರು ನಿಖಿಲ್‌ರನ್ನು ಅದ್ದೂರಿಯಾಗಿ ಸ್ವಾಗತಿಸಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv