ನ್ಯಾಯಕ್ಕಾಗಿ ಸಿಎಂ ನಿವಾಸದ ಎದುರು ವಿಷ ಸೇವಿಸಲು ರೈತರ ಯತ್ನ

ಬೆಂಗಳೂರು: ನ್ಯಾಯಕ್ಕಾಗಿ ಆಗ್ರಹಿಸಿ ರೈತಕುಟುಂಬಗಳು ಮುಖ್ಯಮಂತ್ರಿ ನಿವಾಸದ ಎದುರು ವಿಷ ಸೇವಿಸಲು ಮುಂದಾದ ಪ್ರಸಂಗ ನಡೆದಿದೆ. ಸಿಎಂ ಕುಮಾರಸ್ವಾಮಿಯವರ ಜೆಪಿ ನಗರದ ನಿವಾಸದ ಎದುರು, ರಾಮನಗರ ತಾಲೂಕಿನ ತೆಂಗಿನ ಕಲ್ಲು, ಲಂಬಾಣಿ ತಾಂಡ, ಅಮ್ಮನದೊಡ್ಡಿ ಗ್ರಾಮದ ಮೂರು ರೈತ ಕುಟುಂಬಗಳು ವಿಷ ಸೇವಿಸಲು ಮುಂದಾದರು. ಗಣಿ ಮಾಲೀಕ ನಂದಕುಮಾರ್ ಎಂಬುವವರು ಅಕ್ರಮವಾಗಿ ಜಮೀನನ್ನು ತಮ್ಮಿಂದ ಬರೆಯಿಸಿಕೊಂಡಿದ್ದಾರೆ ಅಂತಾ ಆರೋಪಿಸಿದ್ರು. ರೈತರಾದ ನಾಗೇಶ್ ನಾಯಕ್, ರಾಮಣ್ಣ, ರಾಜುನಾಯಕ್ ಎಂಬುವವರಿಂದ ಗಣಿಗಾರಿಕೆಗೆ ಬಳಸಿಕೊಂಡು ಜಮೀನನ್ನು ವಾಪಾಸ್ ನೀಡುವುದಾಗಿ ಒಪ್ಪಂದ ಮಾಡಿಕೊಂಡು ಜಮೀನು ಪಡೆದಿದ್ದ. ಆದ್ರೆ ಈಗ ಜಮೀನು ಕೊಡಲು ನಿರಾಕರಿಸಿದ್ದು, ಜಮೀನು ನನ್ನದೇ ಎಂದು ಬೇರೆಯವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಈ ಸಂಬಂಧ ನೊಂದ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಕ್ರಮಕೈಗೊಂಡಿರಲಿಲ್ಲ ಅಂತಾ ಆರೋಪಿಸಿದರು. ಇನ್ನು ಜಮೀನು ಕಳೆದುಕೊಂಡು ಕಂಗಾಲಾದ ರೈತ ಕುಟುಂಬ ಈಗ ಮುಖ್ಯಮಂತ್ರಿಗಳನ್ನೇ ನ್ಯಾಯ ಕೊಡಿಸುವಂತೆ ವಿಷದ ಬಾಟಲ್​ ಹಿಡಿದು ಆಗ್ರಹಿಸಿದರು.