ಕಾರ್ಖಾನೆ ಧೂಳಿನಿಂದ ಬೆಳೆ ಹಾನಿ: ರೈತರ ಪ್ರತಿಭಟನೆ

ಚಿತ್ರದುರ್ಗ: ಕಾರ್ಖಾನೆಯಿಂದ ಬರುವ ಧೂಳಿನಿಂದ ರೈತರ ಬೆಳೆದ ಬೆಳೆ ಹಾನಿಯಾಗುತ್ತಿದೆ ಎಂದು ಆರೋಪಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ.
ರೈತರ ಜಮೀನಿನ ಪಕ್ಕದಲ್ಲಿರುವ ಕಬ್ಬಿಣ, ಸ್ಟೀಲ್​​ ಫ್ಯಾಕ್ಟರ್​​ ನಿಲ್ಲಿಸುವಂತೆ ಹೆಗ್ಗೆರೆ ಗ್ರಾಮದ ರೈತರು ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ನಡುವೆ ಕೊತ್ತಂಬರಿ ಕಾಳು ಇಟ್ಟು ರೈತ ಮುಖಂಡ ಬೂತಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆಯಲ್ಲಿ ಕಾರ್ಖಾನೆ ನಿಲ್ಲಿಸುವಂತೆ ರೈತರು ಆಗ್ರಹಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv