ಷರತ್ತುಗಳ ಮೇಲೆ ಸಾಲ ಮನ್ನಾ ಘೋಷಣೆ ತಪ್ಪು: ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: ಅವೈಜ್ಞಾನಿಕ ಸಾಲ ಮನ್ನಾ ವಿರೋಧಿಸಿ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸಿದ್ರು. ನಗರದ ಫ್ರೀಡಂ ಪಾರ್ಕ್​ನಿಂದ ಮೌರ್ಯ ಸರ್ಕಲ್​ವರೆಗೆ ಪ್ರತಿಭಟನಾ ಱಲಿ ನಡೆಯಿತು. ಪ್ರತಿಭಟನೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ರೈತರು ಭಾಗಿಯಾಗಿದ್ರು.

ಸಿಎಂ ತೆಗೆದುಕೊಂಡ ನಿರ್ಧಾರದಿಂದ 17 ಲಕ್ಷ ರೈತರಿಗೆ ಮಾತ್ರ ಲಾಭ..!
ಪ್ರತಿಭಟನೆ ವೇಳೆ ಮಾತನಾಡಿರುವ ಕೋಡಿಹಳ್ಳಿ ಚಂದ್ರಶೇಖರ್, ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಾಲಮನ್ನಾ ಬಗ್ಗೆ ತೆಗೆದುಕೊಂಡಿರುವ ನಿರ್ಧಾರ ಸರಿಯಿಲ್ಲ. ಸಿಎಂ ತೆಗೆದುಕೊಂಡ ನಿರ್ಧಾರದಿಂದ 17 ಲಕ್ಷ ರೈತರಿಗೆ ಮಾತ್ರ ಲಾಭವಾಗುತ್ತೆ. ಇನ್ನೂ 34 ಲಕ್ಷ ರೈತರು ಕೂಡ ಈ ಯೋಜನೆಯಲ್ಲಿ ಬರೋದಿಲ್ಲಾ. ವಾಣಿಜ್ಯ ಬ್ಯಾಂಕುಗಳ ಹೊರತಾಗಿ 16 ಸಾವಿರ ರೂಪಾಯಿ ಕೋಟಿ ಅಷ್ಟೆ ಉಳಿಯುತ್ತದೆ. ಕೆಲವು ಷರತ್ತುಗಳ ಮೇಲೆ ಸಾಲ ಮನ್ನಾ ಘೋಷಣೆ ತಪ್ಪು. ಕೂಡಲೇ ಅದನ್ನು ಹಿಂತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ರು.

ಹಿಂದಿನ ಸಾಲಗಳನ್ನೂ ಸಹ ಪರಿಗಣಿಸಿ..
2009 ರಿಂದಲೂ ಹಿಂದಿನ ಸಾಲಗಳನ್ನು ಸಹ ಪರಿಗಣಿಸಬೇಕು. ಈಗ ನಿರ್ಧಾರ ತೆಗೆದುಕೊಂಡಿರುವ ಪ್ರಕಾರ 86 ಸಾವಿರ ಕೋಟಿ ರೂಪಾಯಿ ಸಾಲ ಉಳಿಯುತ್ತದೆ. ಅದನ್ನು ಯಾರು ತೀರಿಸುತ್ತಾರೆ. ಈ ಬಗ್ಗೆ ವಿಧಾನಸಭೆ ತೀರ್ಮಾನಿಸಬೇಕು. ಯಾವ ಬೆಳೆಯಿಂದ ಲಾಭ ಸಿಗುತ್ತದೆ ಅಂತಾ ತಿಳಿಸಬೇಕು ಅಂತಾ ಪ್ರತಿಭಟನೆಕಾರರು ಒತ್ತಾಯಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ ಕೂಡ ಇದರ ಬಗ್ಗೆ ತಮ್ಮ ನಿರ್ಧಾರ ತಿಳಿಸಬೇಕು. ವಾಣಿಜ್ಯ ಬ್ಯಾಂಕುಗಳಲ್ಲಿ ಬಡ್ಡಿ ರಿಯಾಯಿತಿ ನೀಡ್ತಿದ್ದಾರೆ. ಒಟ್ಟು ಸಾಲದ ಬಗ್ಗೆ ಸರ್ಕಾರ ಹಾಗೂ ವಿರೋಧ ಪಕ್ಷಗಳು ಚಿಂತಿಸಿ ತೀರ್ಮಾನ ಹೇಳಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ತಾಕೀತು ಮಾಡಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv