ಸಾಲ ಬಾಧೆ ತಾಳಲಾರದೇ ರೈತ ನೇಣಿಗೆ ಶರಣು

ತುಮಕೂರು: ಸಾಲ ಬಾಧೆ ತಾಳಲಾರದೇ ಅನ್ನದಾತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡರಾತ್ರಿ ಶಿರಾ ತಾಲೂಕಿನ ಬಂದಕುಂಟೆ ಗ್ರಾಮದಲ್ಲಿ ನಡೆದಿದೆ.
ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೈತನನ್ನು ನರಸಿಂಹ ಮೂರ್ತಿ(55) ಎಂದು ಹೇಳಲಾಗಿದೆ. ಕೃಷಿಗಾಗಿ ವಿವಿಧ ಬ್ಯಾಂಕ್​ ಸೇರಿದಂತೆ, ಕೈಗಡವಾಗಿ ಒಟ್ಟು 4 ಲಕ್ಷ ಸಾಲವನ್ನು ಮಾಡಿಕೊಂಡಿದ್ದನು. 2 ಎಕರೆ ಜಮೀನು ಹೊಂದಿದ್ದ ರೈತ ನರಸಿಂಹ ಮೂರ್ತಿ ಸಾಲ ಕೊಟ್ಟವರಿಂದ ಪ್ರತಿನಿತ್ಯ ಕಿರಿಕಿರಿಗೆ ಒಳಗಾಗಿದ್ದ ಎನ್ನಲಾಗಿದೆ. ಪಟ್ಟನಾಯಕಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.