ಸಾಲಬಾಧೆಗೆ ಮನನೊಂದು ರೈತ ವಿಷ ಸೇವಿಸಿ ಆತ್ಮಹತ್ಯೆ

ಹಾವೇರಿ: ಸಾಲಬಾಧೆ ತಾಳಲಾರದೆ ಮತ್ತೊಬ್ಬ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ಹಾವೇರಿ ಜಿಲ್ಲೆಯ ಕಳ್ಳಿಹಾಳ ಗ್ರಾಮದಲ್ಲಿ ನಡೆದಿದೆ. ನಾಗಪ್ಪ ಬಸವಣ್ಣೆಪ್ಪ ಕೋರಿ (40) ಮೃತ ದುರ್ದೈವಿ. ನಾಗಪ್ಪ ಬಸವಣ್ಣೆಪ್ಪ ಕಳ್ಳಿಹಾಳ ಗ್ರಾಮದಲ್ಲಿ 1.5 ಎಕರೆ ಜಮೀನು ಹೊಂದಿದ್ದನು. ಜಮೀನಿನಲ್ಲಿ ಯುಟಿಪಿ ಕಾಲುವೆ ಮತ್ತು ಸಬ್​ ಕಾಲುವೆ ಹಾಕಲಾಗಿತ್ತು. ಇದ್ರಿಂದ ಪರಿಹಾರಕ್ಕಾಗಿ ಅಲೆದಾಡಿದ್ದರು ಎನ್ನಲಾಗಿದೆ. ಹಲವಾರು ಬಾರಿ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಮತ್ತು ರಾಜಕೀಯ ಮುಖಂಡರಿಗೆ ಮನವಿ ಮಾಡಿಕೊಂಡಿದ್ದರು. ಇನ್ನು ಕೃಷಿಗಾಗಿ ರೈತ ಮೂರು  ಲಕ್ಷ ಕೈ ಸಾಲ ಮಾಡಿಕೊಂಡಿದ್ದನು. ಪರಿಹಾರದ ಹಣಕ್ಕಾಗಿ ಪ್ರಯತ್ನಿಸಿದರು ಯಾವುದೇ ಪ್ರಯೋಜನೆ ಆಗದರಿಂದಾಗಿ ಮನನೊಂದು ಇಂದು ಮುಂಜಾನೆ ಜಮೀನಿಗೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv