ಪ್ರಯೋಜನಕಾರಿಯಾಗದ ಸಾಲ ಮನ್ನಾ: ಮತ್ತೂ ಒಬ್ಬ ರೈತನ ಆತ್ಮಹತ್ಯೆ

ಚಾಮರಾಜನಗರ: ನಿನ್ನೆಯಷ್ಟೇ ಸಿಎಂ ಕುಮಾರಸ್ವಾಮಿ ಬಜೆಟ್ ಮಂಡಿಸಿ, ರೈತರ ₹ 2 ಲಕ್ಷದೊಳಗಿನ ಸಾಲ ಮನ್ನಾ ಮಾಡಿದ್ರು. ಆದರೆ ಅವರು ಮಾಡಿದ ಸಾಲ ಮನ್ನಾ ಪ್ರಯೋಜನಕಾರಿಯಾಗದೇ ರಾಜ್ಯದ ಇನ್ನೊಬ್ಬ ರೈತ ಸಾವನ್ನಪ್ಪಿದ್ದಾನೆ. ಚಾಮರಾಜನಗರ ಜಿಲ್ಲೆಯ ದೇಮಹಳ್ಳಿ ಗ್ರಾಮದ ರೈತ ಚಿನ್ನಸ್ವಾಮಿ ನೇಣಿಗೆ ಶರಣಾಗಿದ್ದಾರೆ. ಮೃತರು, ಪತ್ನಿ ನೀಲಾಂಬ ಹಾಗೂ ಪೋಷಕರನ್ನು ಅಗಲಿದ್ದಾರೆ.
ಚಾಮರಾಜನಗರದ ಸಂತೆಮರಹಳ್ಳಿ ವೃತ್ತದಲ್ಲಿ ಮೃತ ಚಿನ್ನಸ್ವಾಮಿ ಪಾರ್ಥಿವ ಶರೀರವಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಘಟನೆ ತಿಳಿದು ಸ್ಥಳಕ್ಕೆ ಸಂಸದ ಧೃವನಾರಾಯಣ್, ಸಚಿವ ಪುಟ್ಟರಂಗ ಶೆಟ್ಟಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ಅಲ್ಲದೇ, ಸರ್ಕಾರದಿಂದ ಬರುವ ಸೌಲಭ್ಯಗಳನ್ನು ನೀಡೋದಾಗಿ ಭರವಸೆ ನೀಡಿದರು.
ಸ್ಥಳಕ್ಕೆ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಎನ್ ಮಹೇಶ್ ಬರುವಂತೆ ರೈತರು ಪಟ್ಟು ಹಿಡಿದಿದ್ದರು. ಇದಕ್ಕೆ ಸ್ಪಂದಿಸಿದ ಸಚಿವ ಎನ್. ಮಹೇಶ್ ಸ್ಥಳಕ್ಕೆ ಬೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಮೃತ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ಹಾಗೂ ಕುಟುಂಬ ವರ್ಗದ ಒಬ್ಬರಿಗೆ ಹಿಂದುಳಿದ ಕಲ್ಯಾಣ ಇಲಾಖೆಯಲ್ಲಿ ನೌಕರಿ ಕೊಡಿಸೋದಾಗಿ ಭರವಸೆ ನೀಡಿದ್ದಾರೆ. ಬಳಿಕ ಮಾತನಾಡಿದ ಸಚಿವರು, ಯಾವ ರೈತರೂ ಕೂಡಾ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಅಂತಾ ಕೈಮುಗಿದು ಬೇಡಿಕೊಂಡ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv