ಸಾಲಬಾಧೆಗೆ ಅನ್ನದಾತ ನೇಣಿಗೆ ಶರಣು

ಚಿತ್ರದುರ್ಗ: ಸಾಲಬಾಧೆಯಿಂದ ಅನ್ನದಾತನೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದಲ್ಲಿ ನಡೆದಿದೆ.
ಬಬ್ಬೂರು ಗ್ರಾಮದ ರಾಮಚಂದ್ರಪ್ಪ (40) ಆತ್ಮಹತ್ಯೆ ಮಾಡಿಕೊಂಡ ರೈತ. ರೈತ ರಾಮಚಂದ್ರಪ್ಪ 10 ಎಕರೆ ಜಮೀನು ಹೊಂದಿದ್ದರು. ಆದರೆ ಮೂರು ವರ್ಷದಿಂದ ಮಳೆಯ ಅಭಾವದಿಂದ ಬೆಳೆ ನಷ್ಟ ಹೊಂದಿದ್ದರು. ಕೃಷಿಗಾಗಿ ಸ್ಥಳೀಯ ವ್ಯವಸಾಯ ಸಹಕಾರ ಸಂಘ ಸೇರಿದಂತೆ ವಿವಿಧೆಡೆ ₹ 4.50 ಲಕ್ಷ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲಬಾಧೆಯಿಂದ ಮನನೊಂದಿದ್ದ ರೈತ ಇಂದು ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಹಿರಿಯೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.