ಸಾವಿನಲ್ಲೂ ಸಾರ್ಥಕತೆ ಮೆರೆದ ರೈತನ ಕುಟುಂಬ

ದಾವಣಗೆರೆ: ರೈತನೊಬ್ಬ ಟ್ರ್ಯಾಕ್ಟರ್​​ನಿಂದ ಬಿದ್ದು ಮೃತಪಟ್ಟಿದ್ದ. ಮೃತ ರೈತನ ಕುಟುಂಬದವರು ರೈತನ ಕಣ್ಣುಗಳನ್ನ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದ ರೈತ ಹನುಮಂತಪ್ಪ ಮೃತ ರೈತ. ಇಂದು ಬೆಳಗ್ಗೆ ಗ್ರಾಮದಲ್ಲಿ ಹನುಮಂತಪ್ಪ ತಮ್ಮದೇ ಟ್ರ್ಯಾಕ್ಟರ್​ನಿಂದ ಬಿದ್ದು ಮೃತಪಟ್ಟಿದ್ದರು. ಮೃತ ರೈತನ ಕುಟುಂಬಸ್ಥರು ನಗರದ ಎಸ್.ಎಸ್.ಹೈಟೆಕ್ ಆಸ್ಪತ್ರೆಯಲ್ಲಿ ಕಣ್ಣು ದಾನ ಮಾಡಿದ್ದಾರೆ. ಈ ಮೂಲಕ ಸಾವಿನಲ್ಲೂ ರೈತ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv