ಸಂಬಂಧಿಕರ ಮನೆಗೆ ಬಂದ ರೈತನ ದುರ್ಮರಣ!

ಬೆಳಗಾವಿ: ಕೃಷ್ಣಾ ನದಿ ತೀರದಲ್ಲಿ ವಿದ್ಯುತ್ ಸ್ಪರ್ಶಿಸಿ ರೈತರೊಬ್ಬರು ಸಾವನ್ನಪ್ಪಿದ ಘಟನೆ ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ನಡೆದಿದೆ.

ದರೂರು ಗ್ರಾಮದ ರೈತ ಸಂಗಪ್ಪ ಮೆಂಡಿಗೇರಿ (38) ಸಾವನ್ನಪ್ಪಿದ ರೈತ. ದರೂರು ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದ ಸಂಗಪ್ಪ ಮೆಂಡಿಗೇರಿ ಕೃಷ್ಣಾ ನದಿ ತೀರದಲ್ಲಿ ಪಂಪ್ ಸೆಟ್ ಸ್ಟಾರ್ಟ್​ ಮಾಡಲು ಹೋದಾಗ ವಿದ್ಯುತ್​ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv