ಸಿಡಿಲಿನ ಆರ್ಭಟಕ್ಕೆ ಮತ್ತೊಬ್ಬ ಅನ್ನದಾತ ಬಲಿ

ಯಾದಗಿರಿ: ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಗೆ ಯಾದಗಿರಿ ಜಿಲ್ಲೆ ಯರಗೋಳ ಗ್ರಾಮದಲ್ಲಿ ಸಿಡಿಲು ಬಡಿದು ರೈತರೊಬ್ಬರು ಸಾವನ್ನಪ್ಪಿದ್ದಾರೆ. ಭೀಮಣ್ಣ ಚಡಬೋ(25) ಸಿಡಿಲು ಬಡಿದು ಮೃತಪಟ್ಟ ರೈತ. ನಿನ್ನೆ ರಾತ್ರಿ ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಸಿಡಿಲು ಬಡಿದಿದೆ. ಗಾಯಗೊಂಡ ಭೀಮಣ್ಣ ಚಡಬೋರನ್ನು ಇಂದು ಮುಂಜಾನೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಸಂಬಂಧ ಯಾದಗಿರಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv