ವಿಷ ಸೇವಿಸಿದ ಅನ್ನದಾತ ಚಿಕಿತ್ಸೆ ಫಲಕಾರಿಯಾಗದೇ ಸಾವು

ಹಾಸನ: ಸಾಲಬಾದೆಗೆ ಹೆದರಿ 2 ದಿನಗಳ‌ ಹಿಂದೆ‌ ವಿಷ ಸೇವಿಸಿದ್ದ ರೈತ‌, ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಸಿಡಿಲ ಹೊಸಳ್ಳಿಯ ತಿಮ್ಮೇಗೌಡ(68) ಮೃತ ರೈತ. ಸಹಕಾರಿ ಸಂಘ ಸೇರಿದಂತೆ ಸುಮಾರು 2 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಬ್ಯಾಂಕ್​​ನಲ್ಲಿ ಆಭರಣ ಅಡ ಇಟ್ಟರೂ ಸಾಲ ತೀರಿರಲಿಲ್ಲ. ಸಾಲಕ್ಕೆ ಹೆದರಿದ ತಿಮ್ಮೇಗೌಡ, 2 ದಿನಗಳ‌ ಹಿಂದೆ‌ ವಿಷ ಕುಡಿದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಸಾವನ್ನಪ್ಪಿದ್ದಾರೆ.