ರುಸ್ತುಂ ಶಿವಣ್ಣನ ಪೊಲೀಸ್ ಗೆಟಪ್​ಗೆ ಅಭಿಮಾನಿಗಳು ಫಿದಾ..!

ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ನಟನೆಯ ರುಸ್ತುಂ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಿನಿ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಪಡೀತಿದೆ. ಶಿವಣ್ಣನ ಯಂಗ್ ಅಂಡ್​ ಎನರ್ಜಿಟಿಕ್ ಪೊಲೀಸ್ ಗೆಟಪ್​ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅಲ್ಲದೇ ಟ್ರೈಲರ್​ನಲ್ಲಿ ಹೇಳೋ ‘ಅರೆಸ್ಟ್‌ ಬೊಲೇತೋ ಅಲರ್ಜಿ, ಎನ್‌ಕೌಂಟರ್‌ ಬೊಲೇತೋ ಎನರ್ಜಿ’ ಅನ್ನೋ ಖಡಕ್ ಪಂಚಿಂಗ್ ಡೈಲಾಗ್ ಕೂಡ ಎಲ್ಲೆಡೆ ಹರಿದಾಡ್ತಿದೆ. ಶಿವಣ್ಣ ರಗಡ್​ಲುಕ್, ಹೊಸ ಗೆಟಪ್ ಕಂಡು ಸಾಕಷ್ಟು ಸ್ಟಾರ್ ಮಂದಿಯೂ ಕೂಡ ಬೆರಗಾಗಿದ್ದಾರೆ. ಇದೀಗ ಚಿತ್ರದ ಟ್ರೈಲರ್​ಅ​ನ್ನ ಲಕ್ಷಗಟ್ಟಲೇ ಮಂದಿ ವೀಕ್ಷಿಸಿದ್ದು ಟ್ರೆಂಡಿಂಗ್​ನಲ್ಲಿ 4 ಸ್ಥಾನದಲ್ಲಿ ಸಖತ್ ಸೌಂಡ್ ಮಾಡ್ತಿದೆ.

ಪೊಲೀಸ್ ಆಗಿ ಘರ್ಜಿಸಿದ ಶಿವಣ್ಣ..!
ಇಲ್ಲಿವರೆಗೂ ಹಲವು ಪೊಲೀಸ್ ಪಾತ್ರದಲ್ಲಿ ಕಂಡರೂ ರುಸ್ತುಂ ಚಿತ್ರದಲ್ಲಿ ಮಾತ್ರ ಅಬ್ಬರ ತುಸು ಜೋರಾಗಿಯೇ ಇದೆ. ಸ್ಟಂಟ್ ಮಾಸ್ಟರ್ ರವಿವರ್ಮ ನಿರ್ದೇಶನವಿರೋ ಈ ಚಿತ್ರದ ತುಂಬೆಲ್ಲಾ ಆ್ಯಕ್ಷನ್ ಸೀನ್​ಗಳ ಭರಾಟೆ ಹೆಚ್ಚಾಗಿದೆ. ಜೊತೆಗೆ ಲವ್ ಸೆಂಟಿಮೆಂಟ್, ಕಾಮಿಡಿ ಕೂಡ ಇರಲಿದೆ. ಚಿತ್ರ ಹೈದರಾಬಾದ್, ಬಿಹಾರ ಸೇರಿದಂತೆ,ಮೈಸೂರು ಸೇರಿದಂತೆ ಬಹುತೇಕ ಭಾಗಗಳಲ್ಲಿ ಶೂಟಿಂಗ್ ನಡಿದಿದ್ದು ಮೇಕಿಂಗ್ ಕೂಡ ಅದ್ಭುತವಾಗಿ ಮೂಡಿಬಂದಿದೆ. ಶಿವಣ್ಣನಿಗೆ ಜೋಡಿಯಾಗಿ ಶ್ರದ್ಧಾ ಶ್ರೀನಾಥ್‌ ಭರ್ಜರಿಯಾಗಿ ಕುಣಿದಿದ್ದಾರೆ. ಅಲ್ಲದೇ ವಿವೇಕ್ ಒಬೆರಾಯ್, ಮಯೂರಿ, ರಚಿತಾ ರಾಮ್‌ ಕೂಡ ಬಣ್ಣ ಹಚ್ಚಿದ್ದು ಚಿತ್ರ ಕುತೂಹಲ ಮೂಡಿಸಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv