ಶಿವಣ್ಣ-ಕಿಚ್ಚನ ಡೈಲಾಗ್ಸ್​​ಗೆ ಅಭಿಮಾನಿಗಳು ಫಿದಾ

ಬೆಂಗಳೂರು: ಇದೇ ಮೊದಲ ಬಾರಿಗೆ ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಟ್ಟಿಗೆ ಅಭಿನಯಿಸಿರೋ ‘ದಿ ವಿಲನ್​​’ ಸಿನಿಮಾದ ಅಬ್ಬರ ಶುರುವಾಗಿದೆ. ದೇಶಾದ್ಯಂತ 550ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ರಿಲೀಸ್​ ಆಗಿದೆ. ನಗರದ ಶ್ರೀನಿವಾಸ ಚಿತ್ರ ಮಂದಿರದಲ್ಲಿಯೂ ಸಹ ದಿ ವಿಲನ್​​​ ಪ್ರದರ್ಶನ ಕಾಣುತ್ತಿದೆ. ವಿಶೇಷ ಅಂದರೆ ಇಲ್ಲಿ ಬಹು ನಿರೀಕ್ಷಿತ ಅದರಲ್ಲೂ ಶಿವಣ್ಣನ ಚಿತ್ರಗಳನ್ನ ತಪ್ಪದೇ ಪ್ರದರ್ಶನ ಮಾಡಲಾಗುತ್ತದೆ.

ಶಿವಣ್ಣ-ಕಿಚ್ಚನ ಅಭಿಮಾನಿಗಳು ಡೈಲಾಗ್ಸ್​​ಗೆ ಫಿದಾ ಆಗಿದ್ದು, ಥಿಯೇಟರ್ ಒಳಗೆ ಎಂಜಾಯ್ ಮಾಡಿದ್ದಾರೆ. ಇನ್ನು ಭದ್ರತೆಗಾಗಿ ಚಿತ್ರ ಮಂದಿರದ ಒಳಗಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಶಾಂತಿಯುತವಾಗಿ ಸಿನಿಮಾ ನೋಡಲು ಮನವಿ ಮಾಡಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv