ಮಾಜಿ ಶಾಸಕರಿಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ!

ದಾವಣಗೆರೆ : ಮಾಜಿ ಶಾಸಕರೊಬ್ಬರಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿರುವ ಘಟನೆ  ಹರಿಹರದಲ್ಲಿ ನಡೆದಿದೆ.

ಹರಿಹರದ ಹಳ್ಳದಕೇರಿ ಗರಡಿ ಮನೆಯ ಗಣೇಶನ ವಿಸರ್ಜನೆ ವೇಳೆ ಹರಿಹರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಿ.ಪಿ.ಹರೀಶ್ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಯುವಕರು ಬಿ.ಪಿ. ಹರೀಶ್ ಅವರಿಗೆ ಎರಡು ಕೊಡ ಹಾಲಿನ ಅಭಿಷೇಕ ಮಾಡಿದ್ದಾರೆ. ಇದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಾಲಿನ ಅಭಿಷೇಕದ ಬಳಿಕ ಯುವಕರು ಬಿ.ಪಿ ಹರೀಶ್ ಗೆ ಕೇಸರಿ ಶಾಲು ಹೊದಿಸಿದ್ದಾರೆ. ಬಳಿಕ ಯುವಕರೆಲ್ಲರೂ ಸೇರಿ ಕುಣಿದು ಕುಪ್ಪಳಿಸಿದ್ದಾರೆ. ಯುವಕರ ಅಭಿಮಾನ ಕಂಡು ಮಾಜಿ ಶಾಸಕ ಬಿ.ಪಿ.ಹರೀಶ್ ಸಂತಸಗೊಂಡಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: conatct@firstnews.tv