16 ಬಾರಿ ಸೋತರೂ ಮತ್ತೆ ಸ್ಪರ್ಧೆಗಿಳಿದಿರೋ ಬಾಬಾ

ಉತ್ತರಪ್ರದೇಶ: ಕೇರಳದ ವೈನಾಡಿ​ನಲ್ಲಿ ರಾಹುಲ್ ಗಾಂಧಿ ವಿರುದ್ಧ ಅಖಾಡಕ್ಕಿಳಿದಿರೋ ಪದ್ಮರಾಜನ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಎಲೆಕ್ಷನ್​ನಲ್ಲಿ ಸೋಲಲೆಂದೇ  ಅಖಾಡಕ್ಕಿಳಿಯೋ ಪದ್ಮರಾಜನ್, ಪರಾಜಯದ ವಿಚಾರದಲ್ಲಿ ದಾಖಲೆಯನ್ನೇ ಬರೆದಿದ್ದಾರೆ. ಈಗ ಉತ್ತರಪ್ರದೇಶದಲ್ಲಿಯೂ ಕೂಡ ಒಬ್ಬರು ಎಲೆಕ್ಷನ್ ಕಿಂಗ್ ಇದ್ದಾರೆ. ಹೆಸರು ಫಕ್ಕದ್ ಬಾಬಾ ಅಂತ. ಸತತ 16 ಬಾರಿ ಎಲೆಕ್ಷನ್​ನಲ್ಲಿ ಸೋತಿರೋ ಈ ಬಾಬಾ 17ನೇ ಬಾರಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅಚ್ಚರಿ ಅಂದ್ರೆ 76 ವರ್ಷದ ಈ ಫಕ್ಕದ್ ಬಾಬಾ ಸ್ಪರ್ಧಿಸಿದ 16 ಚುನಾವಣೆಯಲ್ಲೂ ಠೇವಣಿ ಕಳೆದುಕೊಂಡಿದ್ದಾರೆ. ಮತ್ತೆ ಯಾಕೆ ಸ್ಪರ್ಧಿಸಿದ್ದೀರಿ ಅಂತ ಕೇಳಿದ್ರೆ ನಮ್ಮ ಗುರುಗಳ ಆದೇಶವನ್ನ ನಾನು ಪಾಲಿಸುತ್ತಿದ್ದೇನೆ. ಅವರು ಹೇಳಿದ ಪ್ರಕಾರ ನಾನು ಸ್ಪರ್ಧಿಸೋ 20ನೇ ಚುನಾವಣೆಯಲ್ಲಿ ಗೆಲ್ಲುತ್ತೇನೆ. ಹೀಗಾಗಿ ನನಗೆ ಸೋಲಿನ ಬಗ್ಗೆ ಚಿಂತೆಯಿಲ್ಲ ಅಂತಾ ಬಾಬಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ