ನಕಲಿ ನಾಗಮಣಿ ಮಾರಾಟ, ಐವರು ಆರೋಪಿಗಳ ಬಂಧನ

ದಾವಣಗೆರೆ: ನಕಲಿ‌ ನಾಗಮಣಿ ಮಾರಾಟ ಜಾಲ ಪತ್ತೆ ಮಾಡಿ, ಆರೋಪಿಗಳನ್ನು ಬಂಧಿಸುವಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳು, ನೂರಾರು ಕೋಟಿ ರೂಪಾಯಿ ಬೆಲೆಬಾಳುವ ನಾಗಮಣಿ ತಮ್ಮ ಬಳಿ ಇದೆ ಎಂದು ಆನಗೋಡು ಕರಿಬಸಪ್ಪ ಎಂಬುವವರನ್ನು ನಂಬಿಸಿದ್ದರು. ಅದನ್ನು ಮಾರಾಟ ಮಾಡಲು ₹ 50 ಸಾವಿರ ಮುಂಗಡ ಪಡೆದು, ₹ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪಿಎಸ್​ಐ ಕಿರಣ್ ನೇತೃತ್ವದ ತಂಡ ಆನಗೋಡು ಗ್ರಾಮದ ಬಳಿ ಆರೋಪಿಗಳನ್ನು ಬಂಧಿಸಿದೆ. ಕರಿಬಸಪ್ಪ, ಕುಮಾರ್, ಸುರೇಶ್ ಸೇರಿದಂತೆ ಐವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv