8 ಲಕ್ಷಕ್ಕೆ ನಕಲಿ ಬಂಗಾರ ಮಾರಾಟ: 6 ಜನರ ಗ್ಯಾಂಗ್ ಅರೆಸ್ಟ್​

ದಾವಣಗೆರೆ: ನಕಲಿ ಬಂಗಾರ ಮಾರಾಟ ಆರೋಪದ ಮೇಲೆ ಗೆದ್ದಲಹಟ್ಟಿ ಬಳಿ ಇಬ್ಬರು ಮಹಿಳೆಯರು ಸೇರಿದಂತೆ 6 ಜನರ ಗ್ಯಾಂಗ್​ವೊಂದನ್ನು ಸಂತೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿ ತಾಲೂಕಿನ ಗೆದ್ದಲಹಟ್ಟಿ ಗ್ರಾಮದ ಬಳಿ ಶ್ರೀನಿವಾಸ್, ಉಲ್ಲಾಸ್, ರವಿ, ಮಹೇಶ್, ನೇತ್ರಾವತಿ ಹಾಗೂ ಅನುಸೂಯ ಬಂಧಿತ ಆರೋಪಿಗಳು. ಇನ್ನು ಶಂಕರ್, ಧರ್ಮಪ್ಪ ಸೇರಿದಂತೆ 10 ಜನ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ರಾಮನಗರ ಜಿಲ್ಲೆ ಮಾಗಡಿ ತಾಲೂಕು ನಿವಾಸಿ ಹರೀಶ್ ಎಂಬುವವರಿಗೆ ನಕಲಿ ಬಂಗಾರ ಮಾರಾಟ ಮಾಡಿದ್ದರು. ಹರೀಶ್​​ರಿಂದ ₹ 8 ಲಕ್ಷ ಹಣ ಪಡೆದು ಪರಾರಿಯಾಗಿದ್ದರು. ಇಂದು ಆರೋಪಿಗಳು ಸಂತೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರೋ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ, 6 ಜನರನ್ನು ಬಂಧಿಸಿದ್ದಾರೆ. ಇನ್ನು 10 ಜನ ಪರಾರಿಯಾಗಿದ್ದಾರೆ. ಸಂತೇಬೆನ್ನೂರು ಅಪರಾಧ ಠಾಣೆ ಇನ್ಸ್​ಪೆಕ್ಟರ್ ಟಿ.ವಿ.ದೇವರಾಜ್ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv