ಖೋಟಾ ನೋಟು: 7 ಆರೋಪಿಗಳು ಅಂದರ್

ರಾಯಚೂರು: ಖೋಟಾ ನೋಟು ಚಲಾವಣೆಯಲ್ಲಿ ತೊಡಗಿದ್ದ 7 ಜನ ಆರೋಪಿಗಳನ್ನು ಬಂಧಿಸುವಲ್ಲಿ ದೇವದುರ್ಗ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಸಿಂಧನೂರು, ದೇವದುರ್ಗ, ಮಾನ್ವಿ, ಲಿಂಗಸುಗೂರು ಹಾಗೂ ಗದ್ವಾಲ್ ಮೂಲದ ಶ್ರೀನಿವಾಸ್ ರೆಡ್ಡಿ, ರಾಮಕೃಷ್ಣ, ಅಯ್ಯಾಳೆಪ್ಪ, ಹನುಮಂತ, ಪ್ರಕಾಶ್, ಬಸವರಾಜ್ ಮತ್ತು ಸೈಯದ್ ಅಂತಾ ಗುರುತಿಸಲಾಗಿದೆ. ಇನ್ನು ಬಂಧಿತ ಆರೋಪಿಗಳು ಒಂದು ವರ್ಷದಿಂದ ರಾಯಚೂರು ಜಿಲ್ಲೆಯಾದ್ಯಂತ ಖೋಟಾ ನೋಟು ಚಲಾವಣೆ ಮಾಡುತ್ತಿದ್ದರು ಎನ್ನಲಾಗ್ತಿದೆ.
ಬೆಂಗಳೂರು ಮೂಲದ ಅಬ್ದುಲ್ ರೆಹಮಾನ್ ಹಾಗೂ ಅಹ್ಮದ್ ನಿಂದ 2000 ಹಾಗೂ 5೦೦ ಮುಖ ಬೆಲೆಯ ಖೋಟಾ ನೋಟು ಪಡೆದು ಚಲಾವಣೆ ಮಾಡುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಪೊಲೀಸರು ಅವರಿಂದ 2000 ಮುಖ ಬೆಲೆಯ 220 ನೋಟು, ಹಾಗೂ 5೦೦ ಮುಖಬೆಲೆಯ 24 ಖೋಟಾ ನೋಟು ಸೇರಿ ಒಟ್ಟು 4.52 ಲಕ್ಷ ಬೆಲೆಯ ಖೋಟಾ ನೋಟುಗಳನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಇವರೇ ಖುದ್ದು ಖೋಟಾ ನೋಟು ತಯಾರಿಕೆಗೆ ಸಿದ್ಧತೆ ನಡೆಸಿದ್ದರು ಎಂಬ ಮಾಹಿತಿಯನ್ನೂ ಬಿಚ್ಚಿಟ್ಟಿದ್ದಾರೆ. ಐಪಿಸಿ 319, 489 ಬಿ ಮತ್ತು ಸಿ ಅಡಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂರ್ಪಕಿಸಿ:contact@firstnews.tv