ನಕಲಿ ಚಾನೆಲ್​ ಹೆಸರಿನಲ್ಲಿ ಹಣ ಪೀಕುತ್ತಿದ್ದ ಆರೋಪಿಗಳ ಬಂಧನ

ಬೆಂಗಳೂರು: ನಕಲಿ ಲೋಕಲ್​ ಚಾನಲ್ ಸೃಷ್ಟಿಸಿಕೊಂಡು ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ಸಂತೋಷ್, ಅಶೋಕ್, ಮಾಹದೇವ್, ರಾಕೇಶ್ ಗೌಡ, ಆನಂದ್, ನವೀನ್ ಬಂಧಿತ ಆರೋಪಿಗಳು. ಪ್ರಜಾ ಪ್ರತಿನಿಧಿ ಎಂಬ ನಕಲಿ ನ್ಯೂಸ್​ ಚಾನಲ್ ಹೆಸರನಲ್ಲಿ ಆರೋಪಿಗಳು ಹಣ ಪೀಕುತ್ತಿದ್ದರು.
ಬಟ್ಟೆ ಅಂಗಡಿ, ಲಾಡ್ಜ್​ಗಳಿಗೆ ಹೋಗಿ ಶೂಟ್ ಮಾಡಿ ಬಳಿ ಹಣಕ್ಕೆ ಡಿಮಾಂಡ್ ಮಾಡುತ್ತಿದ್ದರು. ಕೊಡಲು ನಿರಾಕರಿಸಿದ್ರೆ ನಿಮ್ಮ ವಿರುದ್ಧ ಕೆಟ್ಟದ್ದಾಗಿ ತೋರಿತ್ತೇವೆ ಅಂತಾ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಬನಶಂಕರಿ, ಬಸವನಗುಡಿ ಸೇರಿ ಹಲವು ಪೊಲೀಸ್​ ಠಾಣೆಗಳಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಬನಶಂಕರಿ ಪೊಲೀಸರ ಅತಿಥಿಯಾಗಿರುವ ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ₹ 1 ಲಕ್ಷ ನಗದು, 1 ಇನೋವಾ ಹಾಗೂ 1 ಒಮ್ನಿ ಕಾರು ವಶಕ್ಕೆ ಪಡೆದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv